ರಂಗಮನೆಯ ಬೆಳ್ಳಿವರ್ಷಕ್ಕೆ ಚಾಲನೆ – ಯಕ್ಷ ಸಂಭ್ರಮ 2026

0

ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ

ವನಜ – ಸುಜನಾ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಯಕ್ಷಸಂಭ್ರಮ 2026 ಆ.29 ರಂದು ವಿಜೃಂಭಣೆಯಿಂದ ನಡೆಯಿತು.


ಸಂಜೆ ಪ್ರಸಿದ್ಧ ಅರ್ಥಧಾರಿಗಳಿಂದ ಭೀಷ್ಮ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ರಂಗಮನೆಯ 25 ನೇ ವರ್ಷದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಹಕಾರಿ ಧುರೀಣ ಪಿ.ಬಿ.ದಿವಾಕರ ರೈ ಹಾಗೂ ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಪ್ರಸಂಗಕರ್ತ ಪ್ರೊ| ಪವನ್ ಕಿರಣಕೆರೆ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ 2026-27 ನೇ ಸಾಲಿನ ವನಜ- ಸುಜನಾ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಶ್ರೀಮತಿ ಡಾ. ವಿದ್ಯಾಶಾರದ ವಂದಿಸಿದರು. ಕೃಷ್ಣಮೂರ್ತಿ ಕೆ. ಕಾರ್ಯಕ್ರಮ ನಿರೂಪಿಸಿದರು. ರವೀಶ್ ಪಡ್ಡಂಬೈಲು, ವಾಮನ ಕೊಯಿಂಗಾಜೆ, ಕಮಲಾಕ್ಷ ಅಡ್ಕಾರ್, ಮನುಜ ನೇಹಿಗ, ಮಮತಾ ಪಡ್ಡಂಬೈಲು ಸಹಕರಿಸಿದರು.

ಯಕ್ಷ ಸಂಭ್ರಮದಲ್ಲಿ ಭೀಷ್ಮ ವಿಜಯ ತಾಳಮದ್ದಳೆಯನ್ನು ಏರ್ಪಡಿಸಲಾಗಿದ್ದು, ಭಾಗವತರಾಗಿ ಹೊಸಮೂಲೆ ಗಣೇಶ್ ಭಟ್, ಮದ್ದಳೆಯಲ್ಲಿ ಪದ್ಯಾಣ ಜಯರಾಮ ಭಟ್, ಚೆಂಡೆಯಲ್ಲಿ ವಳಕುಂಜ ಕುಮಾರ ಸುಬ್ರಹ್ಮಣ್ಯ, ಚಕ್ರತಾಳದಲ್ಲಿ ಮನುಜ ನೇಹಿಗ ಭಾಗವಹಿಸಿದರು. ಭೀಷ್ಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಸಾಲ್ವನಾಗಿ ಜಬ್ಬಾರ್ ಸಮೋ, ಅಂಬೆಯಾಗಿ ಪವನ್ ಕಿರಣಕೆರೆ, ಪರಶುರಾಮನಾಗಿ ರಾಧಾಕೃಷ್ಣ ಕಲ್ಚಾರು ಮತ್ತು ಬ್ರಾಹ್ಮಣನಾಗಿ ಉಬರಡ್ಕ ಉಮೇಶ್ ಶೆಟ್ಟಿಯವರು ಅರ್ಥದಾರಿಗಳಾಗಿ ಭಾಗವಹಿಸಿದರು.