














ಸ್ನೇಹಿತೆಯರ ಕೂಟ ಕೇನ್ಯ ಹಾಗೂ ಕೇನ್ಯ ಶ್ರೀ ದುರ್ಗಾಪಮೇಶ್ವರಿ ದೇವಸ್ಥಾನದ ಸಹಭಾಗಿತ್ವದಲ್ಲಿ ಆ. 28ರಂದು ವರಮಹಾಲಕ್ಷ್ಮಿ ಪೂಜೆ ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ರಂಗಮನೆ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಯಕ್ಷಗಾನ ಚೆಂಡೆ, ಮದ್ದಳೆ ವಾದಕರಾದ ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ
ದಂಪತಿಯನ್ನು ಮತ್ತು ಪಂಜ ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ದಂಪತಿಯನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರಾದ ಗಿರಿನಾಥ ಶೆಟ್ಟಿ ಕೇನ್ಯಗುತ್ತು ಮತ್ತು ಕೇನ್ಯಗುತ್ತು ರವೀಂದ್ರನಾಥ ಶೆಟ್ಟಿಯವರು ಸಾಧಕರನ್ನು ಸನ್ಮಾನಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸ್ನೇಹಿತೆಯರ ಕೂಟದ ಪದಾಧಿಕಾರಿಗಳು, ಸದಸ್ಯರು, ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







