














ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಆಶ್ರಯದಲ್ಲಿ ಹಿರಿಯ ನಾಗರಿಕಯ ದಿನಾಚರಣೆಯ ಪ್ರಯುಕ್ತ ಹಿರಿಯರಾದ ಪಟೇಲ್ ಪಾಲ್ತಾಡು ನಾರಾಯಣ ರೈ ಮತ್ತು ಚಿದಾನಂದ ರಾವ್ ಪಾಟಾಜೆಯವರನ್ನು ಅವರ ಮನೆಯಲ್ಲಿ ಆ. 28ರಂದು ಸನ್ಮಾನಿಸಲಾಯಿತು.
ಪಟೇಲ್ ನಾರಾಯಣ ರೈಯವರನ್ನು ಸನ್ಮಾನಿಸುವ ಸಂದರ್ಭದಲ್ಲಿ ನಾರಾಯಣ ರೈಯವರ ಅಳಿಯ ವಿಲಾಸ್ ರೈ ಪುತ್ರಿ, ಸೊಸೆ ಉಪಸ್ಥಿತರಿದ್ದರು.
ಚಿದಾನಂದ ರಾವ್ ಪಾಟಾಜೆ ಯವರನ್ನು ಗೌರವಿಸುವ ಸಂದರ್ಭದಲ್ಲಿ ಚಿದಾನಂದ ಪಾಟಾಜೆಯವರ ಪುತ್ರ ಶ್ರೀರಾಮ ಪಾಟಾಜೆ ಹಾಗೂ ಸೊಸೆ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲ. ಕುಂಬ್ರ ದಯಾಕರ ಆಳ್ವ, ಕಾರ್ಯದರ್ಶಿ ಲ. ಪ್ರದೀಪ್ ಕುಮಾರ್ ರೈ ಪಾಂಬಾರು, ನಿಕಟಪೂರ್ವ ಅಧ್ಯಕ್ಷ ಲ. ಯತೀಶ್ ಭಂಡಾರಿ, ಪ್ರಥಮ ಉಪಾಧ್ಯಕ್ಷ ಲ. ಚಂದ್ರಹಾಸ್ ರೈ ಪುಡ್ಕಜೆ, ನಿಕಟಪೂರ್ವ ಕೋಶಾಧಿಕಾರಿ ಲ. ಎಂ.ಕೆ ಶೆಟ್ಟಿ ಉಪಸ್ಥಿತರಿದ್ದರು.







