ಸೆ. 5: ಕೊಡೆಂಕಿರಿ – ಮರೆಂಗಾಲದಲ್ಲಿ ಮೊಸರುಕುಡಿಕೆ

0

ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಟ್ರಸ್ಟ್ ಕೊಡೆಂಕಿರಿ-ಮರೆಂಗಾಲ ಇದರ ಆಶ್ರಯದಲ್ಲಿ 18ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಸೆ. 5ರಂದು ನಡೆಯಲಿದೆ.
ಬೆಳಿಗ್ಗೆ 8.00 ಗಂಟೆಯಿಂದ ಗಣಹೋಮ, ಬಳಿಕ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಪರಮೇಶ್ವರಯ್ಯ ಹೆಗ್ಡೆ ಉದ್ಘಾಟಿಸಲಿದ್ದಾರೆ. 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳ ತನಕ ಮತ್ತು ಪುರುಷರಿಗೆ ಹಾಗೂ ‌ಮಹಿಳೆಯರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿದೆ. ಸಂಜೆ 6.00 ಗಂಟೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಮನೋಜ್ ಕೆ.ಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮೌನೇಶ್ ಶರ್ಮ ಬಾಳಿ ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆ ಆನೆಗುಂದಿ ಮಠ ಪಡುಕುತ್ಯಾರು ಇವರು ಧಾರ್ಮಿಕ ಉಪನ್ಯಾಸ ನೀಡಿದ್ದಾರೆ. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 2026ನೇ ಸಾಲಿನ ಎಸ್.ಎಸ್.ಎಲ್‌.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶೌರ್ಯ ಮಕ್ಕಳ ಕುಣಿತ ಭಜನೆ ಮತ್ತು ಸಾಂಸ್ಕೃತಿಕ ಕಲಾತಂಡ ಬಾಳಿಲ-ಮುಪ್ಲೇರ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ ನೇತೃತ್ವದಲ್ಲಿ ಮಕ್ಕಳ ತಂಡದಿಂದ ತಾರಾಕ್ಷಿ ಮದನಾವಳಿ-ವೀರಮಣಿ ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ. ಸಮಿತಿಯ ಅಧ್ಯಕ್ಷರಾಗಿ ಮನೋಜ್ ಕೆ, ಕಾರ್ಯದರ್ಶಿಯಾಗಿ ವಿಜೇತ್ ಮುಪ್ಪೇರ್ಯ ಮತ್ತು ಖಜಾಂಜಿಯಾಗಿ ನವೀನ್ ಎಂ. ಕಾರ್ಯನಿರ್ವಹಿಸುತ್ತಿದ್ದಾರೆ.