















ಶ್ರೀ ಹರಿಹರೇಶ್ವರ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಹರಿಹರ, ಬಾಳುಗೋಡು, ಐನೆಕಿದು ಇದರ ಸಹಭಾಗಿತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 28 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕ್ಷೇತ್ರದ ಪ್ರದಾನ ಅರ್ಚಕ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸ್ಥಾಪಕಾದ್ಯಕ್ಷರಾದ ತಾರ ಮಲ್ಲಾರ,ಗೌರವಾದ್ಯಕ್ಷರಾದ ಗೀತಾ ವಿಶ್ವನಾಥ ಬಿಳಿಮಲೆ, ಅದ್ಯಕ್ಷರಾದ ಲತಾ ಹಿಮ್ಮತ್ ಕಿರಿಭಾಗ, ಕಾರ್ಯದರ್ಶಿ ಶ್ರೀಮತಿ ಉಷಾ ಸೋಮಸುಂದರ ಕೂಜುಗೋಡು, ಕೋಶಾಧಿಕಾರಿ ಶ್ರೀಮತಿ ರೇಷ್ಮಾ ಪ್ರಕಾಶ್, ಕಿರಿಭಾಗ, ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವರ ಮಹಾಲಕ್ಷ್ಮೀ ಸಮಿತಿ ಸದಸ್ಯರು, ಊರಪರವೂರ ಭಕ್ತಾದಿಗಳು ಹಾಜರಿದ್ದರು.







