ಅರಂತೋಡು ಗ್ರಾಮ ಪಂಚಾಯತ್ ನ ನಿರಂತರ 87ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

0

ಅರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನದ ನಿರಂತರ 87ನೇ ತಿಂಗಳ ಸ್ವಚ್ಛತಾ ಕಾರ್ಯಕ್ರಮವು ಶ್ರೀ ದುರ್ಗಾ ಗೆಳೆಯರ ಬಳಗ. (ರಿ )ಅರಂತೋಡು ಇದರ ಸಹಯೋಗದಲ್ಲಿ ದಿನಾಂಕ 30.08.2026ನೇ ಆದಿತ್ಯವಾರದಂದು ನಡೆಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಗೆಳೆಯ ಬಳಗದ ಪದಾಧಿಕಾರಿಗಳಲ್ಲದೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಘಟಕ ಸಿಬ್ಬಂದಿಗಳು, ಪಂಚಾಯತ್ನ ನಿಕಟ ಪೂರ್ವ ಅಧ್ಯಕ್ಷರು, ನಿರಂತರವಾಗಿ ಪಂಚಾಯತ್ ನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುತಿರುವ ಸ್ವಚ್ಛತಾ ಸೇನಾನಿಗಳು ಭಾಗವಹಿಸಿದರು.