ಬೆಳಗ್ಗೆ ಸಾಲುಗಟ್ಟಿ ನಿಂತ ಪಡಿತರದಾರರು















ಆಲೆಟ್ಟಿ ನ್ಯಾಯ ಬೆಲೆ ಅಂಗಡಿಯಲ್ಲಿ ರಜಾ ದಿನದಲ್ಲಿಯೂ ಪಡಿತರದಾರರಿಗೆ ಅಕ್ಕಿ ವಿತರಣೆ ಮಾಡಲಾಯಿತು.
ಸರ್ವರ್ ಸಮಸ್ಯೆಯಿಂದಾಗಿ ಹಾಗೂ ಅಕ್ಕಿ ಸರಬರಾಜು ತಡವಾಗಿಬಂದಿರುವುದರಿಂದ ಪಡಿತರದಾರರಿಗೆ ಅಕ್ಕಿ ವಿತರಿಸುವಲ್ಲಿ ಬಾಕಿಯಿದ್ದು ತಿಂಗಳ 30 ನೇ ತಾರೀಕಿನೊಳಗಾಗಿ ಎಲ್ಲಾ ಪಡಿತರರಿಗೆ ಅಕ್ಕಿ ವಿತರಿಸಲು ಸುತ್ತೋಲೆ ಇರುವುದರಿಂದ ಬಾಕಿ ಉಳಿದ ಸುಮಾರು 90 ಮಂದಿ ಪಡಿತರದಾರರಿಗೆ ಆ.30 ರಂದು ಆದಿತ್ಯವಾರ ದಂದು ಸಿಬ್ಬಂದಿಗಳಾದ ಜಯರಾಮ ಕೆ.ಡಿ ಮತ್ತು ಮಧುಸೂದನ್ ರವರು ಕರ್ತವ್ಯನಿರ್ವಹಿಸುತ್ತಿದ್ದಾರೆ.
ಅಕ್ಕಿ ಪಡೆದುಕೊಳ್ಳಲು ಬಾಕಿ ಇರುವ ಎಲ್ಲಾ ಪಡಿತರರಿಗೆ ಈಗಾಗಲೇ ಮಾಹಿತಿಯನ್ನು ಮೆಸೆಜ್ ಮೂಲಕ ತಿಳಿಸಲಾಗಿದೆ ಎಂದು ಮಾರಾಟ ಸಹಾಯಕರು ತಿಳಿಸಿದರು.







