ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 113 ನೇ ಮಹಾಸಭೆ

0

ರೂ. 553.26 ಕೋಟಿ ವ್ಯವಹಾರ-ರೂ. 2.40 ಕೋಟಿ ನಿವ್ವಳ ಲಾಭ

ಪಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 113ನೇ ವಾರ್ಷಿಕ ಮಹಾಸಭೆಯು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆ. 30 ರಂದು ಜರುಗಿತು. ಸಂಘವು 5,131 ಸದಸ್ಯರನ್ನು ಹೊಂದಿ 9.41 ಕೋಟಿ ಪಾಲು ಬಂಡವಾಳ ಸಂಗ್ರಹಿಸಿ, 58.48 ಕೋಟಿ ಠೇವಣಿ ಹೊಂದಿದ್ದು, ರೂ. 43.24 ಕೋಟಿ ದ. ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು, 94.72 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ ಶೇ. 97.76 ವಸೂಲಾಗಿದ್ದು, ವಾರ್ಷಿಕ ರೂ. 553.26 ಕೋಟಿ ವ್ಯವಹಾರ ನಡೆಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 2,40,30,511-00 ನಿವ್ವಳ ಲಾಭಗಳಿಸಿದೆ ಹಾಗೂ ಸದಸ್ಯರಿಗೆ 11% ಡಿವಿಡೆಂಡ್ ವಿತರಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ಸಂಘದ ಕೇಂದ್ರ ಕಚೇರಿಯ ಗೋದಾಮು ಕಟ್ಟಡದ ಮೇಲಂತಸ್ತಿನ ಕಾಮಗಾರಿಯನ್ನು ಸುಮಾರು 22.31 ಲಕ್ಷದಲ್ಲಿ ನಡೆಸಲು ತೀರ್ಮಾನಿಸಿದ್ದು, ಕೇನ್ಯ ಶಾಖೆಯ ನೂತನ ಕಟ್ಟಡದ ಮೇಲಂತಸ್ತಿನಲ್ಲಿ ಸುಸಜ್ಜಿತ ಸಭಾಂಗಣ ಹಾಗೂ ಸಂಸ್ಥೆಯ ಭದ್ರತೆ ದೃಷ್ಟಿಯಿಂದ ನೂತನ ಗೃಹ ನಿರ್ಮಾಣವನ್ನು ರಚಿಸುತ್ತಿದ್ದು ಅಂದಾಜು 37.58 ಲಕ್ಷ ವೆಚ್ಚದೊಂದಿಗೆ ಪೂರ್ಣಗೊಳ್ಳುತ್ತಿದೆ. ಸದಸ್ಯರ ಅನುಕೂಲಕ್ಕೆ ತೆಂಗಿನಕಾಯಿ ಸುಲಿಯುವ ಮೆಷಿನನ್ನು ಕನಿಷ್ಠ ಬಾಡಿಗೆಯಲ್ಲಿ ನೀಡುತ್ತಿದ್ದೇವೆ ಹಾಗೂ ಇ-ಸ್ಟಾಂಪ್ ವ್ಯವಸ್ಥೆಯನ್ನು ಪುನರಾರಂಭಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ರವರು ಅಧ್ಯಕ್ಷತೆ ವಹಿಸಿ ವಿವರಿಸಿದರು.

ಸನ್ಮಾನ :
2025-26ನೇ ಸಾಲಿನಲ್ಲಿ ಅತ್ಯಧಿಕ ಅಡಿಕೆ ಮಾರಾಟ ಗಂಗಾಧರ ಶಾಸ್ತ್ರಿ ಸಿ., ಪುತ್ಯ, ಶಿವರಾಮಯ್ಯ ಎಚ್. ಕರ್ಮಾಜೆ,
ಅತ್ಯಧಿಕ ಕರಿಮೆಣಸು ಮಾರಾಟ ರಮೇಶ್ ಭಟ್ ಪಿ., ಜೈ ಶಂಕರ್ ಹೆಚ್, ಅತ್ಯಧಿಕ ಕೊಕ್ಕೋ ಮಾರಾಟ ಶ್ರೀಮತಿ ಡಾ. ಲೀಲಾವತಿ ಕುದ್ಮಾರುಬೆಟ್ಟು, ವಾಸುದೇವ ಮಲ್ಲಾರ,ಅತ್ಯಧಿಕ ರಬ್ಬರ್ ಮಾರಾಟ ಕೇಶವ ಗೌಡ ಕುದ್ವ, ಪ್ರಕಾಶ್ ಗೌಡ ಗೆಜ್ಜೆ, ಸಣ್ಣ ಹಿಡುವಳಿದಾರ ಪೈಕಿ ಅತ್ಯಧಿಕ ಕೃಷಿ ಉತ್ಪನ್ನ ಮಾರಾಟ ಮಾಡಿದ ಬಾಲಕೃಷ್ಣ ಬೀಡಾರಕಟ್ಟೆ,ಶೇಷಮ್ಮ ಕರಿಮಜಲು, ಅತ್ಯಧಿಕ ಗೊಬ್ಬರ ಖರೀದಿ ಕುಸುಮಾಧರ ಪುರಿಯ, ಶ್ರೀಕೃಷ್ಣ ಭಟ್ ಕೆ.,ಅತ್ಯಧಿಕ ಪೈಪು ಮತ್ತು ಬಿಡಿಭಾಗ ಖರೀದಿ ಶ್ರೀಮತಿ ಮಂಜುಳಾ ಹೆಚ್,ಸದಾನಂದ ಕಾರ್ಜ,ಅತ್ಯಧಿಕ ಗೃಹಬಳಕೆ ಸಾಮಗ್ರಿಗಳ ಖರೀದಿ ನಾಗರಾಜ ಮಲ್ಕಜೆ, ದಯಾನಂದ ಕಿನ್ನಿಕುಮ್ರಿ, ಅತ್ಯುತ್ತಮ ಗ್ರಾಹಕರು ಶಿವರಾಮಯ್ಯ ಎಚ್. ಕರ್ಮಾಜೆ, ವೆಂಕಟ್ರಮಣ ಕೆ. ಗುಂಡಡ್ಕ ಸನ್ಮಾನಿಸಲಾಯಿತು.

ಅತ್ಯುತ್ತಮ ನವೋದಯ ಸ್ವ-ಸಹಾಯ ಗುಂಪುಗಳಾಗಿ ಅಳ್ಪೆ, ಐವತ್ತೊಕ್ಲು ಶ್ರೀ ಉಳ್ಳಾಳ್ತಿ ನವೋದಯ ಸ್ವ-ಸಹಾಯ ಸಂಘ, ,ಬಳ್ಪ
ಚಿಗುರು ನವೋದಯ ಸ್ವ-ಸಹಾಯ ಸಂಘ , ಕೂತ್ಕುಂಜ ಶಿವ ಪುರುಷ ನವೋದಯ ಸ್ವ-ಸಹಾಯ ಸಂಘ ,ಕಾಯಂಬಾಡಿ-ಕೇನ್ಯ ಶ್ರೀ ದೇವಿ ಮಹಿಳಾ ನವೋದಯ ಸ್ವ-ಸಹಾಯ ಸಂಘವನ್ನು ಗೌರವಿಸಲಾಯಿತು.

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ದೈವಿತ್ ಕೆ ಸಿ ಕೆಮ್ಮೂರು, ಗಗನ್ ಕೆ ಕೆರೆಮೂಲೆ, ಪಂಜ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ಯ ಪಲ್ಲೋಡಿ, ತೀರ್ಥೇಶ್ ಬಿ ಎಸ್ ಬಡ್ಡಕೋಟಿ, ಪಂಜ ಪದವಿ ಪೂರ್ವ ಕಾಲೇಜ್ ನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ರಕ್ಷಿತಾ ಜಿ ಗೆಜ್ಜೆ, ವನ್ಯಶ್ರೀ ಕರ್ಮಾಜೆ, ಕಲಾ ವಿಭಾಗದ ವಿದ್ಯಾರ್ಥಿಗಳಾದ ಕಾವ್ಯ ಕಾಳಮಜಲು, ಯಶಸ್ವಿನಿ ಪಿ ಬಿನ್ನಾಜೆ ಮನೆ ರವರನ್ನು ವಿದ್ಯಾನಿಧಿ ನೀಡಿ ಗೌರವಿಸಲಾಯಿತು.ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಇವರ ವತಿಯಿಂದ ಶಾಶ್ವತ ನಿರಖು ಠೇವಣಿಯ ಬಡ್ಡಿಯಲ್ಲಿ 60 :40 ಅನುಪಾತದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪಂಜದ 7ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಇಬ್ಬರನ್ನು ಪ್ರೋತ್ಸಾಹಿಸುವ ಸಲುವಾಗಿ ಸಾನ್ವಿ ಎನ್ ಎಸ್ ಮತ್ತು ವಿದ್ಯಾ ರವನ್ನು ಗೌರವಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಕಂಬಳ ರವರ ಪ್ರಯೋಜಕತ್ವದಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರಿಗೆ ಅದೃಷ್ಟ ಕೂಪನ್ ಯೋಜನೆಯಲ್ಲಿ
ವನಿತಾ ಅತ್ಯಡ್ಕ, ಮನೋಹರ ಎಣ್ಣೆಮಜಲು, ಮೋಹನ್ ಮೇಲ್ಪಾಡಿ, ನೇಮಿರಾಜ ಪಲ್ಲೋಡಿ, ಗಗನ್ ಕಟ್ಟೆ ಮನೆ, ರೇವತಿ ಪಲ್ಲೋಡಿ, ರಾಧಾಕೃಷ್ಣ ಸಿಟಿ, ಜೈ ಶಂಕರ್ ಕರ್ಮಜೆ, ಸುಂದರ್ ದಾಸ್, ತ್ರಿವೇಣಿ ದೊಡ್ಡಮನೆ ವಿಜೇತರು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ 5 ಸದಸ್ಯರನ್ನು ಅದೃಷ್ಟ ಚೀಟಿ ಮೂಲಕ ಆಯ್ಕೆ ಮಾಡಲಾಯಿತು. ಸೀತಾರಾಮ ಚಿದ್ಗಲ್ಲು, ಹೊನ್ನಪ್ಪ ಕಂರ್ಬು ನೆಕ್ಕಿಲ, ಮಹಾಬಲ ಕಂರ್ಬು, ನವೀನ್ ಅಡ್ಕ, ರಾಧಮ್ಮ ಕುಳ ವಿಜೇತರು.

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ:
ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಅಳಿ ಉಳುವಿನ ಪ್ರಶ್ನೆ . ಇದನ್ನು ನಾವು ಕೇವಲ ಸರಕಾರಕ್ಕೆ ನಿರ್ಣಯ ಕಳುಹಿಸಿದರೆ ಸಾಲದು. ಈ ಬಗ್ಗೆ ಎಲ್ಲಾರು ಒಂದಾಗಿ ಉಗ್ರ ರೀತಿಯ ಹೋರಾಟ ಮಾಡುವ ಅಗತ್ಯ ವಿದೆ.ಎಂದು ಶಿವರಾಮಯ್ಯ ಕರ್ಮಾಜೆ ಹೇಳಿದರು. ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಕುಳ ಪುಟ್ಟಣ್ಣ ಗೌಡ, ಲಕ್ಷ್ಮಣ ಗೌಡ ಬೊಳ್ಳಾಜೆ, ವೆಂಕಟೇಶ್ವರ ಜೋಯಿಷ ಮೊದಲಾದವರು ಚರ್ಚಿಸಿದರು. ಸೆ. 1 ರಂದು ಬಳ್ಪದಲ್ಲಿ ಈ ಬಗ್ಗೆ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬನ್ನಿ ಎಂದು ಆ ಭಾಗದ ಗ್ರಾಮಸ್ಥರು ಸಭೆಗೆ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯಿಸುವ ಮತ್ತು ಪಂಜ ಗ್ರಾಮ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚಿಸಿ ನಿರ್ಣಯಿಸಲು ಹೇಳುವ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಹೇಳಿದರು.

ಸಂಘದ ಸದಸ್ಯರಿಗೆ ಹೊಸ ವಿಮಾ ಯೋಜನೆಯನ್ನು ರಾಮ್ ಮೋಹನ್ ರವರು ವಿವರಿಸಿದರು. ಸಾಲಗಾರ ಸದಸ್ಯ ಮೃತಪಟ್ಟರೆ 20 ಸಾವಿರದಿಂದ 20 ಲಕ್ಷ ತನಕ ಸಾಲದ ಮೊತ್ತವನ್ನು ಕಂಪೆನಿ ತುಂಬಲಿದ್ದು ಪ್ರಸ್ತುತ 18 ರಿಂದ 64 ವರ್ಷ ಪಾಲಿಸಿದಾರನಿಗೆ ಇರುವುದಾಗಿ ಅವರು ವಿವರಿಸಿದರು.

“ವಿಮೆ ಮೊತ್ತ ಕಟ್ಟುವಾಗ ಕಾನೂನು ಇರುವುದಿಲ್ಲ. ಕ್ಲೈಮ್ ಆದಾಗ ಹಲವು ಕಾನೂನುಗಳು ಆರಂಭವಾಗುತ್ತದೆ. ಇದನ್ನು ಮೊದಲೇ ನೀವು ಸರಿ ಪಡಿಸಿಕೊಳ್ಳಬೇಕು. ಎಂದು
ಪ್ರಕಾಶ್ ಜಾಕೆ ಹೇಳಿದರು.

ಇದು ಒಳ್ಳೆಯ ಯೋಜನೆ. ಆದರೆ ವಿಮಾ ಮೊತ್ತ ಪಡೆಯಲು ಮೃತನ ಪತ್ನಿಗೆ ಕಾನೂನಲ್ಲಿ ಅವಕಾಶವಿದೆ.ಈ ಬಗ್ಗೆ ನೀವು ಸರಿಯಾಗಿ ಕಂಪೆನಿಯಿಂದ ಮಾಹಿತಿಯನ್ನು ಪಡೆದು ಆರಂಭಿಸಿ ಎಂದು. ಅಂಕುಶ್ ಕುದ್ವ ಹೇಳಿದರು.

ಇದು ಸಂಘದ ಮೂಲಕವೇ ವಿಮಾ ಯೋಜನೆ ನಡೆಯುವುದರಿಂದ ಅಂತಹ ಸಮಸ್ಯೆ ಬರುವುದಿಲ್ಲ. ಈ ಬಗ್ಗೆ ವಿಮರ್ಶಿಸುತ್ತೇನೆ ಎಂದು ರಾಮ್ ಮೋಹನ್ ರವರು ಹೇಳಿದರು.

ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಅಗತ್ಯವಿದೆ ಎಂದು ಅಂಕುಶ್ ಕುದ್ವ ಹೇಳಿದರು. ಸಿಬ್ಬಂದಿ ನಿವೃತ್ತ ವೇತನ ನಿಧಿ ಕುರಿತು ಸಲಹೆ ನೀಡಿದರು . ಈ ಕುರಿತು ನಾವು ಇನ್ಸೂರೆನ್ಸ್ ಕಂಪೆನಿ ಅವರೊಂದಿಗೆ ಮಾತನಾಡಿದ್ದೇವೆ.ಎಂದು ಚಂದ್ರಶೇಖರ ಶಾಸ್ತ್ರಿ ಉತ್ತರಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ದೊಡ್ಡಮನೆ, ಉಪಾಧ್ಯಕ್ಷ ಸದಾನಂದ ಕಾರ್ಜ, ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ ಎನ್, ಚಿನ್ನಪ್ಪ ಗೌಡ ಸಿ ಎಚ್,ವಾಚಣ್ಣ ಕೆರೆಮೂಲೆ,ಅರುಣ ರೈ ಗೆಜ್ಜೆ , ವಾಸುದೇವ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ,ಮುದರ ಐವತ್ತೊಕ್ಲು,ಶ್ರೀಮತಿ ವನಿತ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಕಂಬಳ ದೀಪ ಬೆಳಗಿಸಿ ಉದ್ಘಾಟಿಸಿದರು.ಮಂಜುನಾಥ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ದೀಪಕ್ ದೊಡ್ಡಮನೆ ಮಹಾಸಭೆಯ ನೋಟಿಸ್ ಓದಿದರು.
ಕಸ್ತೂರಿ ರಂಗನ್ ವರದಿಯ ಸಂಪೂರ್ಣ ವಿವರವನ್ನು ಮತ್ತು ಮುಂದಿನ ಹೋರಾಟ ಕುರಿತು ಸುಬ್ರಹ್ಮಣ್ಯ ಕುಳ ವಿವರಿಸಿದರು. ಸತ್ಯದೀಪ್ ಎಂ ಆರ್ ನಿರೂಪಿಸಿದರು. ಸದಾನಂದ ಕಾರ್ಜ ವಂದಿಸಿದರು.