ಹವನ್ ಅಳ್ಪೆ ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಐವತೋಕ್ಲು ಗ್ರಾಮದ ಅಳ್ಪೆ ಮನೆತನದ ದಿ. ಯಶವಂತ್ ಕೆ. ಮತ್ತು ಮಮತಾ ದಂಪತಿಗಳ ಪುತ್ರ ಹವನ್ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಹವನ್ ಅಳ್ಪೆರವರು ಕಡಬ
ಸರಸ್ವತಿ ಇಂಗ್ಲಿಷ್ ಮೀಡಿಯಂ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ. ಇವರ ಸಾಧನೆಗೆ ಯಾದವ್ ಬೀರಂತೆಡ್ಕ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ.