ಕಲ್ಲುಗುಂಡಿ ಸವೇರಪುರ ಶಾಲೆಯ ಸುಜಿತ್ ಕೆ.ಜೆ ಗೆ ಕರಾಟೆಯಲ್ಲಿ ಬಹುಮಾನ

0

ಕಲ್ಲುಗುಂಡಿ ಸವೇರಪುರ ಶಾಲೆಯ ಸುಜಿತ್ ಕೆ.ಜೆ ಗೆ ಕರಾಟೆಯಲ್ಲಿ ಪ್ರಥಮ ಬಹುಮಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆ.27 ರಂದು ಗುತ್ತಿಗಾರಿನ ಕುರಿಯಾಕೋಸ್ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯ ಸ್ಪರ್ಧೆ ನಡೆಸಲಾಗಿತ್ತು.
ಪ್ರೌಢಶಾಲಾ ವಿಭಾಗದ 17 ರ ವಯೋಮಾನದ 50 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಬಾಗಮಂಡಲ ಐಟಿಐ ಯ ಉಪನ್ಯಾಸಕ ಜಯಪ್ರಕಾಶ್ ಕೆ.ಜಿ ಮತ್ತು ಸುಲೋಚನ ದಂಪತಿಗಳ ಪುತ್ರ.