ವಿದ್ಯಾಮಾತಾ ಅಕಾಡೆಮಿ ಮತ್ತು ನಂದ ಗೋಕುಲ ಚಿಣ್ಣರ ಅಂಗಳ ಇದರ ಸಹಭಾಗೀತ್ವದಲ್ಲಿ ನಡೆದ ಕೃಷ್ಣ ವೇಷ-ಯಶೋಧ ಕೃಷ್ಣ ಸ್ಪರ್ಧೆ

0

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ-ಕೃಷ್ಣ ಲೀಲೆ ಅದ್ದೂರಿಯಾಗಿ ನೆರವೇರಿತು.
83ಕ್ಕೂ ಅಧಿಕ ಮುದ್ದು ಕೃಷ್ಣರು ಸೇರಿದಂತೆ ಯಶೋದಾ ಕೃಷ್ಣರು ಸಹ ಪಾಲ್ಗೊಂಡಿದ್ದ ಈ ಸ್ಪರ್ಧಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ವಕೀಲರ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಸ್ವಾತಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನೆರೆದವರನ್ನು ಉದ್ದೇಶಿಸಿ “ಪ್ರಸ್ತುತ ಕಾಲ ಘಟ್ಟದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಚಿಕ್ಕ ಮಕ್ಕಳಲ್ಲಿ ಶ್ರೀ ಕೃಷ್ಣನ ಆದರ್ಶಯುತವಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪೋಷಕರು ಕಾರ್ಯಪ್ರವೃತರಾಗಬೇಕಿದ್ದು ವಿದ್ಯಾಮಾತಾ ಅಕಾಡೆಮಿಯು ಈ ವಿಷಯದಲ್ಲಿ ಗಮನ ಹರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದರ ಜೊತೆಗೆ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ” ಎಂದು ನುಡಿದರು.


ಸ್ಪರ್ಧೆಯ ಮೆರುಗು ಹೆಚ್ಚಿಸಿದ ಯಶೋಧ ಕೃಷ್ಣರು
ಪ್ರತೀ ವರ್ಷ ಕೃಷ್ಣ ವೇಷ ಸ್ಪರ್ಧೆ ಆಯೋಜಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ವರ್ಷದ ಸ್ಪರ್ಧೆಯ ವಿಭಾಗದಲ್ಲಿ 1 ರಿಂದ 3 ವರ್ಷ, 3 ರಿಂದ 6 ವರ್ಷ ಹಾಗೂ ಯಶೋದೆ ಕೃಷ್ಣ ವಿಭಾಗವನ್ನು ಹೊಸದಾಗಿ ಪರಿಚಯಿಸಲಾಗಿತ್ತು.
ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಓಣಂ ಆಚರಣೆ
ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಓಣಂ ಪೂಕಳಂ ರಚಿಸಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಿದರು.

ಆಕರ್ಷಕ ಟ್ರೋಫಿಯ ಜೊತೆಗೆ ನಗದು ಬಹುಮಾನ ಪಡೆದ ಯಶೋಧ ಕೃಷ್ಣರು
2026ನೇ ಸಾಲಿನ ಕೃಷ್ಣ ವೇಷ ಸ್ಪರ್ಧೆಯ ವಿಜೇತರ ವಿವರ ಈ ರೀತಿ ಇದೆ:
1 ರಿಂದ 3 ವರ್ಷದ ವಿಭಾಗದಲ್ಲಿ ಪ್ರಥಮ ಬಹುಮಾನ
ಸುಳ್ಯ ತಾಲೂಕು ಮುರುಳ್ಯದ ಕಳತಾಜೆ ನಿವಾಸಿಗಳಾದ ಶ್ರೀಮತಿ ನಿರೀಕ್ಷಾ ಮತ್ತು ಶ್ರೀ ಕೀರ್ತನ್ ರವರ ಪುತ್ರಿ ದಿತ್ಯಾ ಕೆ ಶೆಟ್ಟಿ
ದ್ವಿತೀಯ ಬಹುಮಾನ: ಪುತ್ತೂರು ತಾಲೂಕು APMC ರಸ್ತೆಯ ಅರುಣ್ ಕಾಂಪ್ಲೆಕ್ಸ್ ನ ನಿವಾಸಿಗಳಾದ ಶ್ರೀಮತಿ ಸ್ವಾತಿ ಮತ್ತು ಶ್ರೀ ಬಾಲಕೃಷ್ಣರವರ ಪುತ್ರಿ ಶ್ರೀವಿ ಬಿ

ತೃತೀಯ ಬಹುಮಾನ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಈದು ಇಲ್ಲಿಯ ನಿವಾಸಿಗಳಾದ ಶ್ರೀಮತಿ ರಶ್ಮಿತಾ ಜೈನ್ ಮತ್ತು ಶ್ರೀ ಶರ್ಮಿತ್ ಜೈನ್ ರವರ ಪುತ್ರ ಕೃತರ್ವ್ ಸತ್ಯಾ ಜೈನ್

3 ರಿಂದ 6 ವರ್ಷದ ವಿಭಾಗ:
ಪ್ರಥಮ ಬಹುಮಾನ: ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಇಲ್ಲಿಯ ನಿವಾಸಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ಶ್ರೀ ಶಿವರಾಮ್ ರವರ ಪುತ್ರಿ ಮಾನ್ಯ ಶ್ರೀಯಾ

ದ್ವಿತೀಯ ಬಹುಮಾನ: ಪುತ್ತೂರು ತಾಲೂಕು ನಿಡ್ಪಳ್ಳಿಯ ನಿವಾಸಿಗಳಾದ ಶ್ರೀಮತಿ ಶೋಭಾ ಕೆ ಮತ್ತು ಜನಾರ್ಧನ ಡಿ ರವರ ಪುತ್ರಿ ಚವಿಷ್ಕಾ ದುರ್ಗಾ

ತೃತೀಯ ಬಹುಮಾನ: ಪುತ್ತೂರು ತಾಲೂಕು ಮಾಡಾವು ನಿವಾಸಿಗಳಾದ ಶ್ರೀಮತಿ ಚೈತನ್ಯ ಸಿ ರೈ ಮತ್ತು ಚಂದ್ರಶೇಖರ ಎಸ್ ರವರ ಪುತ್ರಿ ಚಾರಿತ್ರ್ಯ ಸಿ ರೈ

ಯಶೋದ ಕೃಷ್ಣ ವಿಭಾಗದ:
ಪ್ರಥಮ ಬಹುಮಾನ:
ಪುತ್ತೂರು ತಾಲೂಕು ಕಸಬಾ ನಿವಾಸಿ ಶ್ರೀ ಸುಧಾಕರ ರವರ ಪತ್ನಿ ಶ್ರೀಮತಿ ಭವ್ಯ ಕೆ ಹಾಗೂ ಮಗಳಾದ ಅನಿತಾ ಕೆ ಆಚಾರ್ಯ

ದ್ವಿತೀಯ ಬಹುಮಾನ:
ಬಂಟ್ವಾಳ ತಾಲೂಕು ಕುಲ ನಿವಾಸಿ ಶ್ರೀ ಲೋಹಿತ್ ಪಿ ರವರ ಪತ್ನಿ ಶ್ರೀಮತಿ ಲಿಖಿತ ಎಂ ಮತ್ತು ಮಗಳಾದ ಚಿರಣ್ವಿ ಎಂ

ತೃತೀಯ ಬಹುಮಾನ: ಪುತ್ತೂರು ತಾಲೂಕು ಚಿಕ್ಕ ಮೂಡ್ನೂರು ನಿವಾಸಿ ಶ್ರೀ ಪುರುಷೋತ್ತಮ ಕೆ ರವರ ಪತ್ನಿ ಶ್ರೀಮತಿ ವಿಮಲತೇಜಾಕ್ಷಿ ಮತ್ತು ಮಗಳಾದ ಋತ್ವಿಕಾ ಪಿ
ರವರು ಬಹುಮಾನವನ್ನು ಜಯಿಸಿರುತ್ತಾರೆ. ಅಲ್ಲದೇ 2026ನೇ ಸಾಲಿನ ಕೃಷ್ಣ ವೇಷ ಸ್ಪರ್ಧೆ-ಕೃಷ್ಣ ಲೀಲೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ಕೃಷ್ಣರಿಗೆ ಹಾಗೂ ಯಶೋದ-ಕೃಷ್ಣರಿಗೆ ಗೌರವದ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಚೇತನಾ ಸತೀಶ್, ಶ್ರೀಮತಿ ಗಾಯತ್ರಿ ಹಾಗೂ ದೀಕ್ಷಿತಾ ರವರು ಸಹಕರಿಸಿದರು.
ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈವಹಿಸಿ ನೆರೆದ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ನಂದಗೋಕುಲ ಚಿಣ್ಣರ ಅಂಗಳ ಇದರ ಮುಖ್ಯಸ್ಥರಾದ ಶ್ರೀಮತಿ ಪವಿತ್ರ ವಸಂತ್ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿಯಾದ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ, ದೇವಿದ್ಯಾ ರೈ, ಹಾಗೂ ಈ ಕಾರ್ಯಕ್ರಮದ ಯಶಸ್ಸಿಗೆ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಸಹಕರಿಸಿದರು.

6ವರ್ಷದ ಒಳಗಿನ ಮಕ್ಕಳು ಸಾಕ್ಷಾತ್ ಭಗವಂತನ ಸ್ವರೂಪ ಎಂದೇ ನಾವು ಭಾವಿಸುತ್ತೇವೆ. 83ಮುದ್ದು ಕೃಷ್ಣರ ಆಗಮನದಿಂದ ವಿದ್ಯಾಮಾತಾ ಅಕಾಡೆಮಿಯ ಎಲ್ಲಾ ಯೋಜನೆ-ಯೋಚನೆಗಳಿಗೆ ಕೃಷ್ಣ ಪರಮಾತ್ಮನ ಅನುಗ್ರಹ ಸಿಕ್ಕಿದಂತೆ ಆಗಿದೆ. ಪ್ರತಿ ಮುದ್ದು ಕೃಷ್ಣ- ಯಶೋಧ ಕೃಷ್ಣರಿಗೂ ಬಹುಮಾನ ಕೊಡೋದು ವಿದ್ಯಾಮಾತಾದ ಹೆಗ್ಗಳಿಕೆ

-ಭಾಗ್ಯೇಶ್ ರೈ, ಆಡಳಿತ ನಿರ್ದೇಶಕರು -ವಿದ್ಯಾಮಾತಾ ಅಕಾಡೆಮಿ.