ರಿಧಮಿಕ್ ಯೋಗ ಜೋಡಿನೃತ್ಯ

0

ಜಾನ್ವಿ ಮತ್ತು ಅಸ್ಮಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಪುತ್ತೂರು ತಾಲೂಕು ಮಟ್ಟದ ಯೋಗಾಸನಾ ಸ್ಪರ್ಧೆಯ ೧೭ರ ಒಳಗಿನ ವಯೋಮಾನದ ರಿಧಮಿಕ್ ಯೋಗ ಜೋಡಿನೃತ್ಯ ವಿಭಾಗದಲ್ಲಿ ಪ್ರಗತಿ ವಿದ್ಯಾಸಂಸ್ಥೆ, ಕಾಣಿಯೂರಿನ ೯ನೇಯ ತರಗತಿಯ ವಿದ್ಯಾರ್ಥಿಗಳಾದ ಜಾನ್ವಿ ಮಾಳ ಮತ್ತು ಅಸ್ಮಿ ಎಣ್ಮೂರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕಳಂಜರವರ ನಿರಂತರ ಮಾರ್ಗದರ್ಶನ, ತರಬೇತಿ ನೀಡಿದ್ದರು. ಇಬ್ಬರು ವಿದ್ಯಾರ್ಥಿಗಳು ಜೀವನ್ ಟಿ.ಎನ್. ರವರ ನೃತ್ಯ ಸಂಸ್ಥೆಯಾದ ಡ್ಯಾನ್ಸ್ ಆಂಡ್ ಬೀಟ್ಸ್ ಬೆಳ್ಳಾರೆ ಯ ಪ್ರತಿಭಾನ್ವಿತ ನೃತ್ಯಪಟುಗಳಾಗಿದ್ದು, ಅಸ್ಮಿಯವರು ಶ್ರೀ ಮಹಾವಿಷ್ಣು ಮಕ್ಕಳ ಯಕ್ಷಗಾನ ತಂಡ ಬಾಳಿಲ ಮುಪ್ಪೇರ್ಯ ಇದರ ವಿದ್ಯಾರ್ಥಿ.

ನೃತ್ಯವನ್ನು ಡಿಎನ್‌ಬಿ ತಂಡದ ಸಹ ನೃತ್ಯ-ನಿರ್ದೇಶಕ ತೀಕ್ಷಣ್ ಆಚಾರ್ಯ ಪುತ್ತೂರು ಸಂಯೋಜಿಸಿದರು.