ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವದ ಪೂರ್ವಭಾವಿ ಸಭೆ-ಸಮಿತಿ ರಚನೆ

0

ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ಆ. 21 ರಂದು ವಿಜೃಂಭಣೆಯಿಂದ ಜರುಗಲಿದೆ.ಇದರ ಪೂರ್ವಭಾವಿ ಸಭೆ ಮತ್ತು ಶಾರದೋತ್ಸವ ಸಮಿತಿ ರಚನೆ ಶಾರದಾಂಬ ಸಭಾಭವನದಲ್ಲಿ ಸೆ. 2 ರಂದು ನಡೆಯಿತು.
ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಯೋಗೀಶ್ ಚಿದ್ಗಲ್ಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಂಜ ವಲಯ ಮೇಲ್ವಿಚಾರಕರಾದ ಮಮತಾ, ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ,ಜೊತೆ ಕಾರ್ಯದರ್ಶಿ ಸುಮಾ ಕುದ್ವ, ಭಜನಾ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾದ ಧರ್ಮಪಾಲ ಮರಕಡ, ನೂತನ ಕಾರ್ಯದರ್ಶಿ ಉಜ್ವಲ್ ಚಿದ್ಗಲ್ಲು, ನೂತನ ಕೋಶಾಧಿಕಾರಿ ನಳಿನಿ ಮಂಚಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗುರು ಪ್ರಸಾದ್ ತೋಟ ಸ್ವಾಗತಿಸಿದರು. ಉಜ್ವಲ್ ಚಿದ್ಗಲ್ಲು ವಂದಿಸಿದರು.