ಕುಕ್ಕೆ ಸುಬ್ರಹ್ಮಣ್ಯದಲ್ಲಿ 24×7 ವೈದ್ಯರ ನೇಮಕಕ್ಕೆ 1000 ಪತ್ರಗಳ ಚಳವಳಿಗೆ ಚಾಲನೆ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ 24×7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕವಾಗದಿರುವುದನ್ನು ಖಂಡಿಸಿ ಸೆ.2 ನಾಗರಿಕರು, ಭಕ್ತರು ಹಾಗೂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 1000 ಪತ್ರಗಳ ಚಳವಳಿ ನಡೆಯಿತು.

ತುರ್ತು ಚಿಕಿತ್ಸಾ ಘಟಕಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಲಾಗಿದೆ. ಆದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು 1000ಕ್ಕೂ ಅಧಿಕ ಪತ್ರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಚಳವಳಿ ನಡೆಸಲಾಯಿತು.

24×7 ಆಸ್ಪತ್ರೆ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸುಬ್ರಹ್ಮಣ್ಯ ಅತ್ಯಾಡಿ, ಡಾ. ರವಿ ಕಕ್ಕೆಪದವು, ಪವನ್ ಎಂ.ಡಿ., ದೀಪಕ್ ನಂಬಿಯಾರ್, ವಿಮಲಾ ರಂಗಯ್ಯ, ಗೋಪಾಲ್ ಎಣ್ಣೆಮಜಲು, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಸೇರಿದಂತೆ ಸ್ಥಳೀಯ ಗಣ್ಯರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.