













ಸುಳ್ಯ ಜಯನಗರದ ಜೇನುಗೂಡು ಹವ್ಯಾಸಿ ಚಾರಣಿಗರ ತಂಡವು 6 ನೇಯ ಟ್ರಕ್ಕಿಂಗನ್ನು ನೇತ್ರಾವತಿ ಮಾನ್ಸೂನ್ ಗೆ ಕೈಗೊಂಡಿತು.
ಚಾರಣದ ನೇತೃತ್ವವನ್ನು ಹರೀಶ್ ಕೆ.ಬೆಂಗಳೂರು ಮತ್ತು ರಹಿಮಾನ್ ಸುಳ್ಯ ರವರು ವಹಿಸಿದ್ದರು. ಮುರಳಿ ಬೆಂಗಳೂರು, ಅರ್ಪಿತಾ ಬೆಂಗಳೂರು, ಬಸವರಾಜ್ ಬೆಂಗಳೂರು, ಸುನಿಲ್ ಬೆಂಗಳೂರು ,ಧನುಷ್ ಬೆಂಗಳೂರು, ಪ್ರೀತಮ್ ಬೆಂಗಳೂರು, ಅಬ್ದುಲ್ಲ ಕಾಸರಗೋಡು ,
ಹನೀಫ್ ಸುಳ್ಯ ಮತ್ತಿತರರು ತಂಡದಲ್ಲಿ ಭಾಗವಹಿಸಿದರು.
ಪಶ್ಚಿಮ ಘಟ್ಟದ ಪ್ರಶಾಂತ ವಾತಾವರಣ ಕಳಸ ಸಮೀಪದ ಸಂಸೆ ಗ್ರಾಮದ ಮೌಂಟ್ ಹೆವನ್ ಹೋಂ ಸ್ಟೇನಲ್ಲಿ ತಂಗಿ ಬಳಿಕ 7 ಗಂಟೆಗಳ ಟ್ರಕ್ಕಿಂಗ್ ಯಾನವನ್ನು ಕೈಗೊಂಡಿರುತ್ತಾರೆ. ಹವ್ಯಾಸಿ ಜೇನುಗೂಡು ಹೆಸರಿನ ಚಾರಣ ತಂಡ ಪ್ರತಿ ವರ್ಷವು ಟ್ರಕ್ಕಿಂಗ್ ಹಮ್ಮಿಕೊಳ್ಳುವುದು ವಿಶೇಷವಾಗಿದೆ.







