ವಾಲ್ತಾಜೆಯಲ್ಲಿ ವಿಜೃಂಭಣೆಯಿಂದ ನಡೆದ ಮೊದಲ ವರ್ಷದ ಗಣೇಶೋತ್ಸವ

0

ದೇವಚಳ್ಳದ ವಾಲ್ತಾಜೆ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಆಯೋಜನೆ – ಆಕರ್ಷಕ ಕುಣಿತ ಭಜನೆ

ದೇವಚಳ್ಳ ಗ್ರಾಮದ ವಾಲ್ತಾಜೆ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವಾಲ್ತಾಜೆ ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ಮೊದಲ ವರ್ಷದ ಸಾರ್ವಜನಿಕ ಗಣೇಶೋತ್ಸವವು ಇಂದು ವಿಜೃಂಭಣೆಯಿಂದ ಇಂದು (ಸೆ.14ರಂದು) ವಾಲ್ತಾಜೆ ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ 7ರಿಂದ ಗಣಪತಿ ಮೂರ್ತಿ ಆಗಮನ, 7.30ಕ್ಕೆ ಗಣಪತಿ ಹವನ, 8.00ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಪೂರ್ವಾಹ್ನ 10ರಿಂದ ಭಜನಾ ಕಾರ್ಯಕ್ರಮ, ವಿಶೇಷ ಕುಣಿತ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ಗಂಟೆ 5.30ರಿಂದ ಶ್ರೀ ಗಣೇಶ ವಿಗ್ರಹದ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ.