ಯುವಕ ಮಂಡಲ, ಶ್ರೀ ರಾಮ ಭಜನಾ ಮಂಡಳಿ, ಉಜ್ವಲ ಮಹಿಳಾ ಮಂಡಲ ಹಾಗೂ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ಆಯೋಜನೆ
ಯಕ್ಷಗಾನ ಬಯಲಾಟ – ಗಾನ ನೃತ್ಯ ಸಂಭ್ರಮ- ಅದ್ದೂರಿ ಶೋಭಾಯಾತ್ರೆ
ಇಡೀ ಗ್ರಾಮವೇ ಸೇರಿ ಸಂಭ್ರಮಿಸಿದ ಗಣೇಶೋತ್ಸವ ಅದು ಮಡಪ್ಪಾಡಿ ಗಣೇಶೋತ್ಸವ


ಯುವಕ ಮಂಡಲ ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ, ಶ್ರೀರಾಮ ಜನಾ ಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ ಮಡಪ್ಪಾಡಿ ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.14ರಂದು ಯುವಕ ಮಂಡಲದ ಸಭಾಭವನದಲ್ಲಿ ನಡೆಯಲಿದೆ.














ಬೆಳಿಗ್ಗೆ 7ರಿಂದ ಗಣಪತಿ ಹವನ, 7.30ಕ್ಕೆ ಗಣಪತಿ ಮೂರ್ತಿ ಆಗಮನ, 8.00ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಪೂರ್ವಾಹ್ನ 10.00ರಿಂದ ಮಂಜುಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ ಇದರ ಸದಸ್ಯರಿಂದ ಯಕ್ಷಗಾನ ಬಯಲಾಟ ‘ಶ್ರೀದೇವಿ ಮಹಾತ್ಮೆ’ – “ಮಹಿಷವಧೆ” ನಡೆಯಿತು.
ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಿತು.
ಅಪರಾಹ್ನ ಗಂಟೆ 2.3ರಿಂದ ನ್ಯೂ ಶೈನ್ ಮ್ಯೂಜಿಕಲ್ ಮಂಗಳೂರು ಹಾಗೂ ಜೀ ಕನ್ನಡದ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಟೀಂ ನಾಟ್ಯವೇದ ಡ್ಯಾನ್ಸ್ ಸ್ಟುಡಿಯೋ ಕಲ್ಲಡ್ಕ ಅರ್ಪಿಸುವ “ಗಾನ ನೃತ್ಯ ಸಂಭ್ರಮ” ನಡೆಯಿತು.
ಅಪರಾಹ್ನ ಗಂಟೆ 5.00ರಿಂದ ಶ್ರೀ ಗಣೇಶ ವಿಗ್ರಹದ ಶೊಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕೋಡಿಕಲ್ ಮಂಗಳೂರು ಇದರ ಸದಸ್ಯರಿಂದ ಅದ್ದೂರಿ ಪಿಲಿ ನಲಿಕೆ ಹಾಗೂ ಶ್ರೀ ರಾಮಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ಪ್ರದರ್ಶನ ವಿಶೇಷ ಮೆರುಗು ನೀಡಲಿದೆ.







