ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು: ರಾಧಾಕೃಷ್ಣ ಮಾವಿನಕಟ್ಟೆ

0

ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಅಡಿಕೆ, ರಬ್ಬರ್ ಸೇರಿದಂತೆ ಇಲ್ಲಿಯ ಎಲ್ಲಾ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ, ಸಂರಕ್ಷಣೆಗೆ ಮತ್ತು ಕೃಷಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿ, ಅದಕ್ಕೆ ಉತ್ತೇಜನ ನೀಡುವ ವ್ಯವಸ್ಥೆ ಸುಳ್ಯದಲ್ಲಿ ಆಗಬೇಕು. ಭತ್ತ, ತರಕಾರಿಗಳಂತಹ ಆಹಾರ ಉತ್ಪನ್ನಗಳನ್ನು ಬೆಳೆಸಲು, ಅದನ್ನು ಮೌಲ್ಯವರ್ಧನೆ ಮಾಡಲು ಯುವಕ – ಯುವತಿಯರು ಸೇರಿದಂತೆ ಕೃಷಿಕರಿಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ರಾಧಾಕೃಷ್ಣ ಮಾವಿನಕಟ್ಟೆ
ಕೃಷಿಕರು,
ಪ್ರಧಾನ ಕಾರ್ಯದರ್ಶಿಗಳು
ಶ್ರೀ ಮಹಾವಿಷ್ಣು ದೈವಸ್ಥಾನ ಉದಯಗಿರಿ, ಮಾವಿನಕಟ್ಟೆ, ಸುಳ್ಯ ತಾಲೂಕು