ಸುಳ್ಯದಲ್ಲಿ ಕೈಗಾರಿಕಾ ಪ್ರದೇಶ ಮತ್ತು ಐಟಿ ಪಾರ್ಕ್ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿಕೊಡಬೇಕು: ಸುಬೋಧ್ ಶೆಟ್ಟಿ ಮೇನಾಲ

0

ಕೆವಿಜಿ ವಿದ್ಯಾಸಂಸ್ಥೆ ಹೊರತುಪಡಿಸಿದರೆ, ಸುಳ್ಯ ಹೆಚ್ಚಿಗೆ ಅಭಿವೃದ್ಧಿ ಹೊಂದಿರುವುದಿಲ್ಲ. ಸುಳ್ಯ ತಾಲೂಕಿನ ವಿದ್ಯಾವಂತರು ಹೊರಗಡೆ ಹೋಗಿ ನೌಕರಿ ಮಾಡುವಂತಾಗಿದೆ. ಹಾಗಾಗಿ ಸುಳ್ಯದಲ್ಲಿ ಕೈಗಾರಿಕಾ ಪ್ರದೇಶವನ್ನು ಮತ್ತು ಐಟಿ ಪಾರ್ಕ್ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿಕೊಡಬೇಕು. ಇದರಿಂದಾಗಿ ಎಲ್ಲರಿಗೂ ಉದ್ಯೋಗವಕಾಶಗಳು ಹೆಚ್ಚುತ್ತದೆ ಮತ್ತು ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ. ಇದರಿಂದಾಗಿ ಸುಳ್ಯ ಅಭಿವೃದ್ಧಿ ಹೊಂದಬಹುದು ಎಂದು ಸುಳ್ಯ ಬಿಜೆಪಿ ಮಂಡಲ ಕೋಶಾಧಿಕಾರಿ
ಸುಬೋಧ್ ಶೆಟ್ಟಿ ಮೇನಾಲ ಅಭಿಪ್ರಾಯ ತಿಳಿಸಿದ್ದಾರೆ.