ಮಹಿಳೆಯ ತಲೆಗೆ ಗಾಯ, ಆಸ್ಪತ್ರೆಗೆ ದಾಖಲು














ಸುಳ್ಯ ಬಾಳೆಮಕ್ಕಿ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಮಹಿಳೆಯ ತಲೆಯ ಭಾಗಕ್ಕೆ ಗಾಯವಾದ ಘಟನೆ ಸೆ. 16 ರಂದು ಸಂಜೆ ನಡೆದಿದೆ.
ಕುಂಭಕ್ಕೊಡು ಭಾಗದ ಯುವಕ ಅಶ್ವಿನ್ ಎಂಬವರು ಸುಳ್ಯದ ಶ್ರೀರಾಮ್ ಪೇಟೆ ಕಡೆಯಿಂದ ಬರುತ್ತಿದ್ದ ಸಂದರ್ಭ ದ್ವಾರಕ ಹೋಟೆಲ್ ಬಳಿ ಮಹಿಳೆ ರಸ್ತೆ ದಾಟುತ್ತಿದ್ದು ಈ ಸಂದರ್ಭ ಘಟನೆ ಸಂಭವಿಸಿದೆ. ಗಾಯಗೊಂಡ ಮಹಿಳೆ ಪೆರಾಲು ನಿವಾಸಿ ನಿರ್ಮಲಾ ರವರನ್ನು ಕೂಡಲೇ ಸ್ಥಳೀಯರು ಆಟೋರಿಕ್ಷದಲ್ಲಿ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.







