ಅತಿಥಿ ಶಿಕ್ಷಕರ ವೇತನ ಹೆಚ್ಚುವರಿ ಮತ್ತು ಬಾಕಿ ಉಳಿಕೆ ಪಾವತಿ ಬಗ್ಗೆ ಮಂಗಳೂರು ಅಧಿವೇಶನದಲ್ಲಿ ಚರ್ಚೆಯಾಗಿ ಜಾರಿಗೆ ಬರಲಿ : ಚಂದ್ರಶೇಖರ ಕಡೋಡಿ

0

ನಮ್ಮ ಜಿಲ್ಲೆಯ ಅತಿಥಿ ಶಿಕ್ಷಕರ ಬಗ್ಗೆ ಜಿಲ್ಲೆಯ ಶಾಸಕರು ಪಕ್ಷ ಭೇದ ಮರೆತು ಅಗ್ರಹ ಮಾಡಿ ತಕ್ಷಣವೇ ಶಿಕ್ಷಕರ ವೇತನ ಹೆಚ್ಚುವರಿ ಮತ್ತು 3 ತಿಂಗಳ ಸಂಬಳ ಒಮ್ಮೆಗೆ ಪಾವತಿ ಆಗುವಂತೆ ಕ್ರಮ ಕೈಗೊಳ್ಳಬೇಕು. ಕಡಿಮೆ ಸಂಬಳಕ್ಕೆ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕ್ಷಕರನ್ನು ನೂತನ ಶಿಕ್ಷಕರ ನೇಮಕಾತಿ ವೇಳೆ ಆದ್ಯತೆ ಬಗ್ಗೆ ವಿಶೇಷ ನಿಯಮ ರೂಪಿಸಬೇಕು ಹಾಗೂ ಮುಂದೆ ಎಂದು ಈ ರೀತಿಯ ವಿಳಂಬ ಆಗಬಾರದು. ಮೊದಲು ಶಿಕ್ಷಣ ಮತ್ತು ಅರೋಗ್ಯ ಇಲಾಖೆ, ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಆಗಬೇಕು. ಈ ಬಗ್ಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಜಿಲ್ಲಾ ಶಾಸಕರ ಜೊತೆಗೆ ಸದಾ ಇರುತ್ತದೆ.

ಚಂದ್ರಶೇಖರ ಕಡೋಡಿ
ಅಧ್ಯಕ್ಷರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ., ಗುತ್ತಿಗಾರು