ಸುಳ್ಯ ವಕೀಲರ ಸಂಘದ ಅಧ್ಯಕ್ಷತೆಗೆ ಶ್ರೀಹರಿ‌ ಕುಕ್ಕುಡೇಲು ನಾಮಪತ್ರ

0

ಸೆ.26ರಂದು ನಡೆಯಲಿರುವ ಸುಳ್ಯ ವಕೀಲರ ಸಂಘದ ಅಧ್ಯಕ್ಷತೆಗೆ ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು ನಾಮಪತ್ರ ಸಲ್ಲಿಸಿದ್ದಾರೆ.

ಸೆ.15 ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು ಅವರು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ ದಳ ಸುಬ್ರಾಯ ಭಟ್ ಅವರು ನಾಮಪತ್ರ ಸ್ವೀಕರಿಸಿದರು.

ವಕೀಲರ ಸಂಘದ ಅಧ್ಯಕ್ಷತೆಗೆ ಸೆ.9ರಂದು ಜಗದೀಶ್ ಡಿ.ಪಿ. ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷತೆಗೆ ಶ್ರೀಹರಿ ಕುಕ್ಕುಡೇಲು ಹಾಗೂ ಜಗದೀಶ್ ಡಿ.ಪಿ. ಇಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದಂತಾಗಿದೆ.