ರೋಟರಿ ಕ್ಲಬ್ ಸುಳ್ಯ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

0

ದಿ.ಪದ್ಮಶ್ರೀ ಗಿರೀಶ್ ಭಾರದ್ವಾಜ್ ಪ್ರಶಸ್ತಿ ಪ್ರದಾನ ಸಮಾರಂಭ

ಸುಳ್ಯ ರೋಟರಿ ಕ್ಲಬ್ ವತಿಯಿಂದ ಸೆ.16ರಂದು ಸುಳ್ಯ ರೋಟರಿ ಸಮುದಾಯ ಭವನದಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಹಾಗೂ ದಿವಂಗತ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ತೂಗು ಸೇತುವೆಯ ಸರದಾರ ಪದ್ಮಶ್ರೀ ದಿವಂಗತ ಗಿರೀಶ್ ಭಾರದ್ವಾಜ್ ರವರ ಸ್ಮರಣಾರ್ಥವಾಗಿ “ಪದ್ಮಶ್ರೀ ಗಿರೀಶ್ ಭಾರದ್ವಾಜ್ ಪ್ರಶಸ್ತಿ”
ಯನ್ನು ಸುಳ್ಯದ ಹಿರಿಯ ಸಿವಿಲ್ ಇಂಜಿನಿಯರ್ ಸಂಕಪ್ಪ ಗೌಡ ನೀರ್ಪಾಡಿ,ಎಲೆಕ್ಟ್ರಿಕಲ್ ಇಂಜಿನಿಯರ್ ಗಣೇಶ್ ಶರ್ಮಾ ಸಿ ಎ, ಮೆಕ್ಯಾನಿಕಲ್ ಇಂಜಿನಿಯರ್
ನಿತ್ಯಾನಂದ ಮುಂಡೋಡಿಯವರಿಗೆ ನೀಡಿ ಗೌರವಿಸಲಾಯಿತು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಸೀತಾರಾಮ ರೈ ರವರು ಸಾಧಕರಿಗೆ ಸನ್ಮಾನವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ರೊ.ರಾಮಚಂದ್ರ ಹಾಗೂ ನಿವೃತ್ತ ಪ್ರಾಂಶುಪಾಲರಾದ ಉಮ್ಮರ್ ಹಳೆಗೇಟು ರವರು ಉಪಸ್ಥಿತರಿದ್ದರು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಆರ್‌ಟಿಎನ್.ಲತಾ ಮಧುಸೂದನ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.


ಕಾರ್ಯದರ್ಶಿ ಆರ್‌ಟಿಎನ್. ಹರಿರಾಯ ಕಾಮತ್, ಮುಂದಿನ ಸಾಲಿನ ಅಧ್ಯಕ್ಷರಾದ ಆರ್ ಟಿ ಎನ್ ಸುಧಾಕರ್ ಕೊಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕರ ಪರಿಚಯವನ್ನು ಆರ್ ಟಿಎನ್.ಚಂದ್ರಶೇಖರ್ ಪೆರಾಲು ರವರು ವಾಚಿಸಿದರು.ಸಾಧಕರ ಪರವಾಗಿ ಹಿರಿಯ ಇಂಜಿನಿಯರ್ ನಿತ್ಯಾನಂದ ಮುಂಡೋಡಿಯವರು ಮಾತನಾಡಿ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಿದರು.ಕಾರ್ಯಕ್ರಮದ ಆರಂಭದಲ್ಲಿ ದಳ ಸುಬ್ರಾಯ ಭಟ್ ರವರು ಪ್ರಾರ್ಥನೆ ನೆರವೇರಿಸಿದರು. ರೋಟರಿ ಕಾರ್ಯದರ್ಶಿ ರೊ. ಹರಿರಾಯ ಕಾಮತ್ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಖಜಾಂಚಿ ರೊ. ನಳಿನಿ ಕಿರ್ಲಾಯ ಮತ್ತು ರೊ. ಹರ್ಷಿತಾ ಸಹಕರಿಸಿದರು.
ರೊ. ಗಿರೀಶ್ ಭಾರದ್ವಾಜ್ ಕುಟುಂಬಿಕರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುಳ್ಯ ರೋಟರಿ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದ್ದರು.