ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸುವ ಕೆಲಸಗಳು ನಡೆಯಬೇಕಿದೆ :ರಮೇಶ್ ದೇಲಂಪಾಡಿ ಮರ್ಕಂಜ

0

ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸುಳ್ಯ ತಾಲೂಕು ಹಿಂದುಳಿದ ಭಾಗ. ದೊಡ್ಡ ಮಟ್ಟದ ಕೈಗಾರಿಗೆ ಇಲ್ಲದ ಭಾಗ. ಆದ್ದರಿಂದ ಈ ದಿಕ್ಕಿನಲ್ಲಿ ವಿಶೇಷ ಯೋಜನೆಗಳನ್ನು ಈ ಭಾಗಕ್ಕಾಗಿ ಘೋಷಿಸುವ ಕೆಲಸಗಳು ನಡೆಯಬೇಕಿದೆ.
ಕೃಷಿ ಕ್ಷೇತ್ರದಲ್ಲಿ ಇಲ್ಲಿನ ಪ್ರಮುಖ ಬೆಳೆಗಳಾದ ಅಡಿಕೆ ಮಾರಕ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗದಿಂದ ಬಸವಳಿದಿವೆ. ಈ ಎರಡು ಸಮಸ್ಯೆಗಳ ನಿಯಂತ್ರಣ ಮತ್ತು ನಿವಾರಣೆಗಾಗಿ‌ ಯೋಜನೆಗಳು ಬೇಕು.ರಬ್ಬರಿನಲ್ಲಿ ಟ್ಯಾಪರುಗಳ ತೀವ್ರ ಕೊರತೆ ಇಡೀ ಕ್ಷೇತ್ರವನ್ನು ಕಂಗೆಡಿಸಿದೆ. ಇದಕ್ಕೆ ಟ್ಯಾಪಿಂಗ್ ಯಾಂತ್ರೀಕರಣ ಪರಿಹಾರ ಆಗಬಲ್ಲದು. ಇದಕ್ಕಾಗಿ ತರಬೇತಿ ಕಾರ್ಯಕ್ರಮ ಸಮರೋಪಾದಿಯಲ್ಲಿ ನಡೆಯ ಬೇಕಿದೆ.

  • ರಮೇಶ್ ದೇಲಂಪಾಡಿ ಮರ್ಕಂಜ – ಕೃಷಿಕರು