ಸುಳ್ಯ ಶಾರದಾಂಬ ದಸರಾ ಉತ್ಸವದ ಪೂರ್ವ ಸಿದ್ಧತಾ ಸಮಾಲೋಚನಾ ಸಭೆ

0

ಸುಳ್ಯ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಶ್ರೀ ಶಾರದಾಂಬ ಉತ್ಸವ ಸಮಿತಿ, ದಸರಾ ಉತ್ಸವ ಸಮಿತಿ, ಶಾರದಾಂಬ ಉತ್ಸವ ಸಮಿತಿ ಆಶ್ರಯದಲ್ಲಿ 55 ನೇ ವರ್ಷದ ಶಾರದಾಂಬ ದಸರಾ ಉತ್ಸವವು ನಡೆಯಲಿದ್ದು ಇದರ ಪೂರ್ವ ತಯಾರಿಯ ಕುರಿತು ಹಾಗೂ ಆಮಂತ್ರಣ ಪತ್ರ ವಿತರಣೆಯ ವಿಚಾರದ ಬಗ್ಗೆ ಸಮಾಲೋಚನಾ ಸಭೆಯು ಸೆ.16 ರಂದು ಎ.ಪಿ.ಎಂ.ಸಿಸಭಾಂಗಣದಲ್ಲಿ ನಡೆಯಿತು.

ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಕೇಕಡ್ಕ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ “ಆಮಂತ್ರಣ ಪತ್ರ ಹಂಚಿಕೆಯ ಜವಬ್ದಾರಿ ವಹಿಸಿಕೊಂಡ ಸಮಿತಿ ಸದಸ್ಯರು ಕಾರ್ಯಕ್ರಮದ ಪ್ರಾಯೋಜಕರಿಗೆ ಹಾಗೂ ಜಾಹೀರಾತುದಾರರಿಗೆ ಮತ್ತು ವಾರ್ಡ್ ವಾರು ಹಂಚಿಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.
9 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಯಶಸ್ಸಿಗೆ ಆರ್ಥಿಕ ಕ್ರೋಢಿಕರಣದ ಕುರಿತು ಪ್ರಸ್ತಾಪಿಸಿದರು.‌ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಸಾಮೂಹಿಕ ಚಂಡಿಕಾ ಹೋಮದ ಸೇವೆಯ ರಶೀದಿಯನ್ನು ಗ್ರಾಮಾಂತರ ಪ್ರದೇಶದ ಭಕ್ತಾದಿಗಳಿಗೆ ತಲುಪಿಸುವ ಬಗ್ಗೆ ಕಾರ್ಯ ಪೃವೃತ್ತರಾಗುವಂತೆ ತಿಳಿಸಿದರು.

ದಸರಾ ಉತ್ಸವದ ವೆಚ್ಚದ ಬಾಬ್ತು ಸರಕಾರದಿಂದ ಅನುದಾನ ತರಿಸುವ ಸಲುವಾಗಿ ಈಗಾಗಲೇ ಉಸ್ತುವಾರಿ ಸಚಿವರಲ್ಲಿ ಶಿಫಾರಸ್ಸುಮಾಡಲಾಗಿದೆ.ಮುಂದಿನ ದಿನಗಳಲ್ಲಿ ಶಾಸಕರ ಮುಖೇನ ಸರಕಾರದಿಂದ ಅನುದಾನ ತರಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷರಾದ ಗೋಕುಲ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಮಿತಿಯ ಗೌರವ ಸಲಹೆಗಾರರಾದಎನ್.ಎ.ರಾಮಚಂದ್ರ, ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪಗೌಡ,ಕೋಶಾಧಿಕಾರಿ ಅಶೋಕ ಪ್ರಭು ಸುಳ್ಯ, ಯೋಜನಾಧಿಕಾರಿ ಮಾಧವ ಗೌಡ ,ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಬೆಳ್ಯಪ್ಪ ಗೌಡ,ಕಾರ್ಯದರ್ಶಿ ಎಂ.ಕೆ.ಸತೀಶ್, ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.
ಕೋಶಾಧಿಕಾರಿ ಸುನಿಲ್ ಕುಮಾರ್ ಕೇರ್ಪಳ ಸ್ವಾಗತಿಸಿದರು. ಕಾರ್ಯದರ್ಶಿ ರಾಜು ಪಂಡಿತ್ ವಂದಿಸಿದರು. ಜಯಂತ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು. ಶಾರದಾಂಬ ಸಮೂಹ ಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಮಹಿಳಾ ಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.