ಪ್ರೇಕ್ಷಕರ ಮನರಂಜಿಸಿದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ಕಲರವ ಕಾರ್ಯಕ್ರಮ


















ಸುಳ್ಯ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ದೇವತಾರಾಧನಾ ಸಮಿತಿಯ 58 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಧಾರ್ಮಿಕ ಸಭೆಯು ಸೆ.16 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಕಲರವ ನಡೆಯಿತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ರೂಪಕ ಹಾಗೂ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು.
ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರ ನಿರ್ದೇಶನದಲ್ಲಿ ಮಕ್ಕಳಿಂದ ವೇದ ಮಂತ್ರ ಪಠಣ, ಜನಪದ ಗೀತೆಗಳು, ಜನಪದ ನೃತ್ಯ, ದೇಶ ಭಕ್ತಿ ಗೀತೆಗಳು, ಹಾಲಕ್ಕಿ ನೃತ್ಯ, ಕಂಸಾಳೆ,ಗೋವಿನ ಹಾಡು ರೂಪಕ, ಗಣಿತದ ಹಾಡು, ಮಲಯಾಳಂ ನೃತ್ಯ, ಕೃಷ್ಣ ಕಾರುಣ್ಯ ನಾಟಕ, ಕಂಗೀಲು ನೃತ್ಯ ಪ್ರೇಕ್ಷಕರ ಮನರಂಜಿಸಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಅದ್ಯಾಪಕ ವೃಂದದವರು ಸಹಕರಿಸಿದರು. ಸುಮಾರು 101 ವಿದ್ಯಾರ್ಥಿಗಳು ಏಕಕಾಲದಲ್ಲಿ ಮನ ರಂಜಿಸಿದರು.







