
















ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಶ್ರೀ ಬಸವೇಶ್ವರ ದೇವಾಲಯ, ಕುಲ್ಕುಂದ ಬಸವನ ಮೂಲ ಇದರ ವತಿಯಿಂದ15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.13 ಮತ್ತು 14 ರಂದು ನಡೆಯಿತು.
ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಬಸವನಮೂಲೆಯಲ್ಲಿ ಇಲ್ಲಿ ಗಣೇಶೋತ್ಸವ ಜರಗಿದ್ದು ಸೆ.13 ರ ಸಂಜೆ ಜೋಡು ಜೀಟಿಗೆ ಶಕ್ತಿ ಕಲಾ ಬಳಗ ಚಿಲಿಂಬಿ, ಮಂಗಳೂರು ಇವರಿಂದ ಅದ್ದೂರಿಯ ಜನಪದ ನಾಟಕ-“ಸತ್ಯೋದ ಸಾದಿಗ್ ಧರ್ಮೊದ ಬೊಲ್ಪು,” ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸೆ.14 ರ ಬೆಳಗ್ಗೆ ಪ್ರತಿಷ್ಠಾ ಮುಹೂರ್ತ, ಬಳಿಕ ಮಹಾಗಣಪತಿ ಹೋಮ, ಆ ಬಳಿಕ ಭಜನಾ ಕಾರ್ಯಕ್ರಮ – ಶ್ರೀ ಬಸವೇಶ್ವರ ಭಜನಾ ಮಂಡಳಿ, ಬಸವ ಮೂಲ, ಕುಲ್ಕುಂದ, ಇವರಿಂದ ನಡೆಯಿತು. ಬಳಿಕ ಸುಖಪ್ರದಾ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ ನಡೆಯಿತು, ಮಧ್ಯಾಹ್ನ ಮಹಾಪೂಜೆ, ಬಳಿಕ ಪರಿವಾರ ಸಹಿತ ಶ್ರೀ ಬಸವೇಶ್ವರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.. ಅಪರಾಹ್ನ ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆದು ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಶ್ರೀ ಮಹಾಗಣಪತಿ ದೇವರ ಅದ್ದೂರಿ ಶೋಭಾಯಾತ್ರೆ ನಡೆದು ಕುಮಾರಧಾರ ನದಿಯಲ್ಲಿ ಮೂರ್ತಿಯ ಜಲ ಸ್ತಂಭನ ನಡೆಯಿತು. ಶೋಭಾಯಾತ್ರೆಯುದ್ದಕ್ಕೂ ಚೆಂಡೆ, ಟ್ಯಾಬ್ಲೋ ಗಳಿದ್ದು ಭಜನೆಯೊಂದಿಗೆ ಸಾಗಲಾಯಿತು. ಭಕ್ತರು ಹೂ, ಹಣ್ಣು, ಕಾಯಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಬಸವೇಶ್ವರ ದೇವಾಲಯದವರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.







