ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಅಧಿಕೃತವಾಗಿ ಪರಿಗಣಿಸಿ ಸರಕಾರ ಅನುಷ್ಠಾನ ಮಾಡಬೇಕು ಮತ್ತು ಉಳ್ಳಾಲ ಭಾಗದ ಕಡಲ್ಕೋರೆತಕ್ಕೆ ಶಾಶ್ವತ ಪರಿಹಾರ ನೀಡಬೇಕು: ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

0

ನಮ್ಮ ಜಿಲ್ಲೆಯಲ್ಲಿ ಕರ್ನಾಟಕ ಸರಕಾರದ ಸಚಿವ ಸಂಪುಟ ಸಭೆ ನಡೆಯುವುದು ಸ್ವಾಗತರ್ಹ. ಆದರೆ ಕೇವಲ ಕಟಾಚಾರಕ್ಕೆ ನಡೆಯದೆ ನಮ್ಮ ಕರಾವಳಿಯ ಅವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂಬುವುದು ಜನರ ನಿರೀಕ್ಷೆಯೂ ಆಗಿದೆ. ಬಹಳ ಮುಖ್ಯವಾಗಿ ನಮ್ಮ ಕರಾವಳಿ ತುಳುನಾಡು ಎಂದೇ ಪ್ರಸಿದ್ಧ ಪಡೆದ ಈ ನಾಡಿನ ಆಡು ಭಾಷೆ ಹೆಚ್ಚಿನವರ ಮಾತೃ ಭಾಷೆ ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಅಧಿಕೃತವಾಗಿ ಪರಿಗಣಿಸಿ ಸರಕಾರ ಅನುಷ್ಠಾನ ಮಾಡಿ ಘೋಷಣೆ ಮಾಡಬೇಕು. ಉಳ್ಳಾಲ ಭಾಗದ ಕಡಲ್ಕೋರೆತಕ್ಕೆ ಶಾಶ್ವತ ಪರಿಹಾರ , ಸುಸಜ್ಜಿತ ಉಳ್ಳಾಲ ತಾಲ್ಲೂಕು ಕಚೇರಿ,ತೊಕ್ಕೊಟ್ಟುವಿನಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ,ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೀನುಗಾರಿಕೆ ಜಟ್ಟಿ ನಿರ್ಮಾಣ, ಮಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಳ್ಳಾಲದ ವೀರ ರಾಣಿ ಅಬ್ಬಕ್ಕಳ ಹೆಸರು ಪ್ರಸ್ತಾಪ, ಪ್ರವಾಸೋದ್ಯಮ, ಅಂತಾರಾಷ್ಟ್ರೀಯ ಕ್ರೀಡಾoಗಣ, ಸರಕಾರಿ ಮೆಡಿಕಲ್ ಕಾಲೇಜು, ಪ್ರಮುಖ ರಸ್ತೆಗಳಲ್ಲಿ ಬಸ್ಸು ನಿಲುಗಡೆ, ಅಂಡರ್ ಪಾಸ್, ಫ್ಲೈ ಓವರ್ ನಿರ್ಮಾಣ ಮಾಡಿ ವಾಹನ ದಟ್ಟನೆ ಕಡಿಮೆ ಮಾಡುವುದು, ಬಡ ಜನರಿಗೆ ಮನೆ ನಿರ್ಮಾಣಕ್ಕೆ ಕಲ್ಲು ಹೊಯಿಗೆ ಕಡಿಮೆ ದರದಲ್ಲಿ ಸಿಗುವಂತೆ ಕ್ರಮಕೈಗೊಳ್ಳುವುದು, ಪ್ರಮುಖ ನದಿಗಳ ಹೂಳೆತ್ತುವ ಯೋಜನೆ, ಕೃಷಿಕರಿಗೆ ಅನುಕೂಲಕರ ಯೋಜನೆ,ಆರೋಗ್ಯ, ಶಿಕ್ಷಣ, ಉದ್ಯಮ ಕಲೆ ಸಾಹಿತ್ಯ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವುದು. ಮುಂತಾದ ಅಭಿವೃದ್ಧಿ ಕೆಲಸ ಕಾರ್ಯಕ್ರಮಗಳಿಗೆ ಕಾಯಕಲ್ಪ ನೀಡುವುದು ಈ ಸಚಿವ ಸಂಪುಟ ಸಭೆಯಲ್ಲಿ ಆಗಬೇಕು ಎಂದು ಬಿಜೆಪಿ ದ.ಕ ಜಿಲ್ಲೆ ಯ ಉಪಾಧ್ಯಕ್ಷರು ಮತ್ತುಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯ ತಿಳಿಸಿದ್ದಾರೆ.