















ದ.ಕ ಸಂಪಾಜೆ ಗ್ರಾ.ಪಂ.ರಾಷ್ಟ್ರೀಯ ಹೆದ್ದಾರಿ 275 ಕಡೆಪಾಲ ಎಂಬಲ್ಲಿ ಕಸ ಎಸೆದ ಮೈಸೂರು ಬನ್ನಿಮಂಟಪ ಅಂಗಡಿಯೊಂದರ ಕಸವನ್ನು ರಾತ್ರಿ ವೇಳೆ ಸುರಿದು ಹೋಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ಸೆ. 17 ರಂದು ಸಂಪಾಜೆಯಲ್ಲಿ ವರದಿಯಾಗಿದೆ.
ಸಂಪಾಜೆ ಗ್ರಾಮ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಕಸಗಳನ್ನು ಎಸೆಯುತ್ತಿರುವ ದೂರುಗಳು ಆಗಾಗ್ಗೆ ಗ್ರಾ.ಪಂ. ಗೆ ಸಾರ್ವಜನಿಕರು ದೂರು ನೀಡುತ್ತಿದ್ದರು. ಆದರೆ ಸೆ. 16 ಎಂದಿನಂತೆ ಗ್ರಾ.ಪo ಕಸವಿಲೇರಿ ಸಿಬ್ಬಂದಿಗಳು ಸ್ವಚ್ಛತೆ ಮಾಡುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಏಳು ಕಸದ ಗೋಣಿಚೀಲಗಳು ಕಂಡು ಬಂದಿದೆ. ಕೂಡಲೇ ಸಿಬ್ಬಂದಿಯು ಮಾಜಿ . ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್ ರವರಿಗೆ ಮಾಹಿತಿ ತಿಳಿಸಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ , ಪ್ರಮೋದ್ ಗಮನಕ್ಕೆ ತಂದು ಸ್ಥಳಕ್ಕೆ ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಮಾಜಿ ಉಪಾಧ್ಯಕ್ಷ ಎಸ್ ಕೆ ಹನೀಫ್ ತೆರಳಿ ಕಸದ ವಾಹನದ ಮೂಲಕ ಕಸವನ್ನು ಕಲ್ಲುಗುಂಡಿ ಕಚೇರಿಗೆ ತಂದು ಪರಿಶೀಲನೆ ನಡೆಸಲಾರಂಭಿಸಿದರು. ಕಸದ ರಾಶಿಯನ್ನು ಪರಿಶೀಲನೆ ನಡೆಸಿದಾಗ ಜಿ ಎಸ್.ಟಿ ನಂಬರ್ ಇರುವ ರಶೀದಿ ಪತ್ತೆಯಾಗಿದ್ದು , ಜಾಲಾಡಿದಾಗ ಮಂಡ್ಯ ಮೂಲದ ವ್ಯಕ್ತಿಯೊಬ್ಬರ ದೂರವಾಣಿ ಸಂಖ್ಯೆ ದೊರೆತಿದೆ. ಕೂಡಲೇ ಗ್ರಾ.ಪಂ ದೊರಕಿದ ನಂಬರ್ ಗೆ ಕರೆ ಮಾಡಿದ್ದು , ವ್ಯಕ್ತಿಯು ತಪ್ಪನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಎಸೆದಿರುವುದನ್ನು ಒಪ್ಪಿಕೊಂಡರೆನ್ನಲಾಗಿದೆ. ಬಳಿಕ ಅವರಿಗೆ ರೂ.5000 ದಂಡ ಹಾಕಿ ಕಸ ಎಸೆಯದಂತೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.







