













ದೇಶದ ಪ್ರಧಾನಮಂತ್ರಿ, ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಬೆಳೆದು ನಿಂತಿರುವ, ದೇಶವನ್ನು ವಿಶ್ವಗುರು ಸ್ಥಾನದಲ್ಲಿ ಮುಂದುವರೆಸುತ್ತಿರುವ, ದೇಶವನ್ನು ವಿಕಸಿತ, ಆರ್ಥಿಕ ಸದೃಢವಾಗಿ ಲೋಕಮಾನ್ಯ ಗೊಳಿಸುತ್ತಿರುವ ಸ್ವಚ್ಚ ಭಾರತ ಹರಿಕಾರ ಡಿಜಿಟಲ್ ಇಂಡಿಯಾದ ರೂವಾರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಭಾಜಪ ಕಾರ್ಯಕರ್ತರ ವತಿಯಿಂದ ಪ್ರಧಾನಮಂತ್ರಿಗಳಿಗೆ ದೀರ್ಘ ಆಯುಷ್ಯ, ಶಕ್ತಿ, ಕೊಟ್ಟು ಮುಂದಿನ ಚುನಾವಣೆಯಲ್ಲಿ ಕೂಡ ವಿಜಯಶಾಲಿ ಆಗಲೆಂದು ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗರಾಜ ಕ್ಷೇತ್ರ ಅಂಬಾಡಿಮೂಲೆಯಲ್ಲಿ ಕನ್ಯಾ ಮಾಸದ ಸಂಕ್ರಮಣದ ಶುಭ ಗಳಿಗೆಯಲ್ಲಿ ಸೆ. 17 ರಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಮಂಡಲ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಶೋಕ ಅಡ್ಕಾರು, ಅಂಜನಾದ್ರಿ ಬೂತ್ ಸಮಿತಿಯ ಜವಾಬ್ದಾರಿ ಪದಾಧಿಕಾರಿ ಹಾಗೂ ಶ್ರೀ ಕ್ಷೇತ್ರದ ಮೊಕ್ತೇಸರ ಗಣೇಶ ಅಂಬಾಡಿಮೂಲೆ, ಅಡ್ಕಾರು-ಪದವು ವಾರ್ಡ್ ಸಮಿತಿ ಪದಾಧಿಕಾರಿ ಮನ್ಮಥ (ಮನು), ಅಂಜನಾದ್ರಿ ಬೂತ್ ಸಮಿತಿ ಕಾರ್ಯದರ್ಶಿ ನವೀನ್ ಅಂಬಾಡಿಮೂಲೆ ಹಾಗೂ ಅಂಜನಾದ್ರಿ ವಾರ್ಡ್ ಸಮಿತಿ ಕಾರ್ಯಕರ್ತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.







