ಮೂವರು ಗ್ರಾ.ಪಂ. ಸಿಬ್ಬಂದಿಗಳಿಗೆ ಗ್ರೇಡ್ 2 ಕಾರ್ಯದರ್ಶಿಗಳಾಗಿ ಪದೋನ್ನತಿ

0

ಜಾಲ್ಸೂರಿನ ಚಿದಾನಂದ ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ಗೆ, ಮಂಡೆಕೋಲಿನ ಬಾಲಕೃಷ್ಣ ಪಂಜಕ್ಕೆ, ಅರಂತೋಡಿನ ಮೋಹನ ಸಂಪಾಜೆಗೆ ವರ್ಗ

ಸುಳ್ಯ ತಾಲೂಕಿನ ಮೂವರು ಗ್ರಾ.ಪಂ. ಸಿಬ್ಬಂದಿಗಳಿಗೆ ಗ್ರೇಡ್ ೨ ಕಾರ್ಯದರ್ಶಿಗಳಾಗಿ ಪದೋನ್ನತಿಯಾಗಿದೆ. ಜಾಲ್ಸೂರು ಗ್ರಾ.ಪಂ.ನಲ್ಲಿ ಕ್ಲರ್ಕ್ ಕಂ ಬಿಲ್ ಕಲೆಕ್ಟರ್ ಆಗಿರುವ ಚಿದಾನಂದರಿಗೆ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಕಾರ್ಯದರ್ಶಿಯಾಗಿ ಪದೋನ್ನತಿಯಾಗಿದೆ. ಮಂಡೆಕೋಲು ಗ್ರಾ.ಪಂ.ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿರುವ ಬಾಲಕೃಷ್ಣ ಮಾವಂಜಿಯವರು ಕಾರ್ಯದರ್ಶಿಯಾಗಿ ಪಂಜ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ. ಅರಂತೋಡು ಗ್ರಾ.ಪಂ.ನಲ್ಲಿ ಬಿಲ್ ಕಲೆಕ್ಟರ್ ಆಗಿರುವ ಮೋಹನರಿಗೆ ಕಾರ್ಯದರ್ಶಿಯಾಗಿ ಪದೋನ್ನತಿಗೊಂಡಿದ್ದು, ಸಂಪಾಜೆ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ. ಮಂಡೆಕೋಲು ಗ್ರಾ.ಪಂ.ಗೆ ಅರಿಯಡ್ಕ ಗ್ರಾ.ಪಂ.ನಿಂದ ರೋಹಿಣಿ ಎಂಬವರು ಕಾರ್ಯದರ್ಶಿಯಾಗಿ ಬರಲಿದ್ದಾರೆಂದು ತಿಳಿದು ಬಂದಿದೆ.
ದ.ಕ.ಜಿಲ್ಲೆಯಲ್ಲಿ ಒಟ್ಟು ೧೭ ಮಂದಿ ಗ್ರಾ,ಪಂ.ಸಿಬ್ಬಂದಿಗಳಿಗೆ ಗ್ರಾ.ಪಂ. ಕಾರ್ಯದರ್ಶಿಯಾಗಿ ಪದೋನ್ನತಿಯಾಗಿದೆ.