













ಅಲ್ ಅಮೀನ್ ಸಮಿತಿ ಪೆರಾಜೆ ಇದರ ವತಿಯಿಂದ ಪುಣ್ಯ ಪ್ರವಾದಿ ಮದಹ್ ಆಚರಣೆ ಕಾರ್ಯಕ್ರಮದ ಅಂಗವಾಗಿ ಸುಳ್ಯ ಅರಂಬೂರು ಪಿ ಆರ್ ಗಾರ್ಡನ್ ನಲ್ಲಿ
ಆಯೋಜಿಸಿದ್ದ ‘ಅಧ್ಯಾತ್ಮಿಕ ಸಂಗಮ – ಇಷ್ಕ್ ಮಜ್ಲೀಸ್’ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿ ಅಲ್ಪಸಂಖ್ಯಾತರ ಸೊಸೈಟಿಯ ಮಾಜಿ ನಿರ್ದೇಶಕ, ಜೈಭಾರತ್ ಯುವಕ ಮಂಡಲ, ಗಾಂಧಿನಗರ ಇದರ ಸದಸ್ಯ ಹಾರಿಸ್ ಭಾರ್ಪಣೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫಾ, ಎಂ.ವೈ.ಎಫ್. ಅಧ್ಯಕ್ಷ ಉಮ್ಮರ್ ಕೆ.ಎಸ್., ಉನೈಸ್ ಪೆರಾಜೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಬಿ. ಇಬ್ರಾಹಿಂ, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಇಕ್ಬಾಲ್ ಸುಣ್ಣಮೂಲೆ, ಮುನಾಫರ್ ನಾವೂರು, ನವಾಝ್ ಪಂಡಿತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.







