ಸುಬ್ರಹ್ಮಣ್ಯದಲ್ಲಿ 56 ನೇ ವರ್ಷದ ಶ್ರೀ ಗಣೇಶೋತ್ಸವದ ಕಾರ್ಯಕ್ರಮಗಳು ಆರಂಭ

0

ಇಂದು “ಚಿ.ಸೌ .ಸುಮಂಗಲಾ” ನಾಟಕ, ನಾಳೆ “ಅತಿಕಾಯ ಮೋಕ್ಷ ತಾಳೆಮದ್ದಳೆ, ನೃತ್ಯ ಕಾರ್ಯಕ್ರಮ”

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ಇದರ
56ನೇ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14ರಂದು ಆರಂಭವಾಗಿದ್ದು ದಿನಂಪ್ರತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದಸ. ಸೆ..18 ರ ಸಂಜೆ ಭಜನೆ, ಬಳಿಕ ನಾದ ವೈಭವ ತಂಡದವರಿಂದ “ವಾದ್ಯ ಗೋಷ್ಠಿ,” ನಡೆದು ಅಮ್ಮ ತಂಡ ಕುಡ್ಲ ಅಭಿನಯಿಸುವ ಸುಂದರ್ ರೈ ಮಂದಾರ ನಿರ್ಮಾಣ ನಿರ್ದೇಶನ ಅಭಿನಯದಲ್ಲಿ ತುಳು ಹಾಸ್ಯಮಯ ನಾಟಕ ” ಚಿ.ಸೌ.ಸುಮಂಗಲಾ” ನಡೆಯಲಿದೆ. ಸೆ. 19 ರ ಪೂರ್ವಾಹ್ನ ಗಂಟೆ 9.30ರಿಂದ ಯಕ್ಷಗಾನ ತಾಳಮದ್ದಳೆ- “ಅತಿಕಾಯ ಮೋಕ್ಷ” ನಡೆಯಲಿದೆ.. ಸಂಜೆ ಗಂಟೆ 4.00 ಧಾರ್ಮಿಕ ಸಭೆ ನಡೆದು, ಬಳಿಕ 6 ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ. ನಡೆಯಲಿದೆ. ರಾತ್ರಿ ವಸಂತ್ ಆಚಾರ್ಯ ಕಾಯರ್ತೋಡಿ ಸಾರಥ್ಯದ ಪ್ಯೂಶನ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಸುಳ್ಯ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಲಿದೆ.