ಪಂಜ : ಶಿವಸ್ಮರಣೆ ಅಂಗವಾಗಿ ಶ್ರೀ ದೇವರಿಗೆ ಶತರುದ್ರಾಭಿಷೇಕ

0

🔶 ಭಕ್ತರಿಂದ ಸುಮಾರು 5000 ಸೀಯಾಳ ಸಮರ್ಪಣೆ

ಪಂಜ ಶ್ರೀ ಸದಾಶಿವ
ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ಸಾನಿಧ್ಯ ವೃದ್ಧಿಗಾಗಿ ಸೆ.7 ರಿಂದ ನಿರಂತರವಾಗಿ ಭಕ್ತಾಧಿಗಳಿಂದ ನಡೆಯುತ್ತಿರುವ ಶಿವ ಸ್ಮರಣೆ ಕಾರ್ಯಕ್ರಮ ಸೆ.18 ರಂದು 12 ನೇ ದಿನ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ಸೆ. 18 ರಂದು ಶ್ರೀ ದೇವರಿಗೆ ಶತರುದ್ರಾಭಿಷೇಕ ಸೇವೆ ನಡೆಯಿತು.

ಭಕ್ತರಿಂದ ಸುಮಾರು 5000 ಸೀಯಾಳ ಸಮರ್ಪಣೆಯಾಗಿದ್ದು,
ಪಾರಾಯಣ, ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,
ಆನ್ನಸಂರ್ಪಣೆ ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದು,ಸುಮಾರು 1500 ಮಿಕ್ಕಿ
ಭಕ್ತಾದಿಗಳು ಪಾಲ್ಗೊಂಡಿದ್ದರು.