ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಶಾಸಕಿ ಭಾಗೀರಥಿ ಮುರುಳ್ಯ ನಿವಾಸದಲ್ಲಿ ಆಶೀರ್ವಾದದ ದೀಪ ಬೆಳಗಿಸಿ ಪ್ರಾರ್ಥನೆ

0

ದೇಶದ ಪ್ರಧಾನಿ ನರೇಂದ್ರ ಮೋದಿಯವರ 76 ನೇ ವರ್ಷದ ಹುಟ್ಟುಹಬ್ಬ ಹಾಗೂ ರಾಷ್ಟ್ರ ಸಮರ್ಪಿತ ಜನಸೇವೆಯ ಸಾರ್ಥಕ 25 ವರ್ಷಗಳು ಪೂರೈಸಿದ ಪ್ರಯುಕ್ತ ಹಾಗೂ ಸೇವಾ ಸಂಕಲ್ಪದ ಅಂಗವಾಗಿ ಶಾಸಕಿ ಭಾಗೀರಥಿ ಮುರುಳ್ಯರ ನಿವಾಸದಲ್ಲಿ ಆಶೀರ್ವಾದದ ದೀಪ ಬೆಳಗಿಸಿ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ದೀರ್ಘಾಯುಷ್ಯ,ಆರೋಗ್ಯ ಹಾಗೂ ಉತ್ತಮ ಆಡಳಿತ ನೀಡುವ ಶಕ್ತಿ, ಚೈತನ್ಯ ಹಾಗೂ ದೇಶಸೇವೆಗೆ ಇನ್ನಷ್ಟು ಶಕ್ತಿ-ಸಾಮರ್ಥ್ಯ ದೊರೆಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಯಿತು.