ಪಿಲಿನಲಿಕೆ ಸ್ಪರ್ಧೆ : ಎನ್. ಜಿ.ಟಿ ಟೈಗರ್ಸ್ ಬಾಳಿಲ ಪ್ರಥಮ, ರಾಯಾ ಟೈಗರ್ಸ್ ಪುತ್ತೂರು ದ್ವಿತೀಯ

ಸಾರ್ವಜನಿಕ ಆರಾಧನಾ ಸಮಿತಿ ಪಂಜ, ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2026 ಇದರ ವತಿಯಿಂದ ಜರುಗಿದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಸೆ .16 ರಂದು ಪಂಜದಲ್ಲಿ ಪ್ರಪ್ರಥಮ ಬಾರಿಗೆ ಪಿಲಿನಲಿಕೆ ಸ್ಪರ್ಧೆ ನಡೆಯಿತು .














ಫಲಿತಾಂಶ: ಒಟ್ಟು ನಾಲ್ಕು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಎನ್. ಜಿ.ಟಿ ಟೈಗರ್ಸ್ ಬಾಳಿಲ ಪ್ರಥಮ,ರಾಯಾ ಟೈಗರ್ಸ್ ಪುತ್ತೂರು ದ್ವಿತೀಯ,ಮಾಣಿಕ್ಯ ಟೈಗರ್ಸ್ ಎಲಿಮಲೆ ತೃತೀಯ ಸ್ಥಾನ ಪಡೆಯಿತು.
ಹಾಗೂ ಪಂಜದ ಪುಟಾಣಿ ಮಕ್ಕಳ ಶ್ರೀ ಶಾರದಾ ಜನಪದ ಕಲಾ ತಂಡ ಪಂಜ ವಿಶೇಷ ಮನ್ನಣೆಗೆ ಪಾತ್ರವಾಯಿತು.

ಪಿಲಿನಲಿಕೆ ಸ್ಪರ್ಧೆಯನ್ನು ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಗಂಗಾಧರ ಗೌಡ ಗುಂಡಡ್ಕ ದೀಪ ಬೆಳಗಿ ಉದ್ಘಾಟಿಸಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷರಾದ ಸವಿತಾರ ಮುಡೂರು, ಪಿಲಿನಲಿಕೆ ಸ್ಪರ್ಧೆಯ ಸಂಚಾಲಕ ಆಶೀತ್ ಕಲ್ಲಾಜೆ, ಶೋಭಾಯಾತ್ರೆ ಸಂಚಾಲಕ ಅನುರಾಜ ಕಕ್ಯಾನ,ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು,
ಆರಾಧನಾ ಸಮಿತಿ ಪದಾಧಿಕಾರಿಗಳು,
ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ,ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿರುವ ಗಣೇಶ್ ನಡುವಾಲ್ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು.
ಗಣೇಶ್ ನಡುವಾಲ್ ರಾಜೇಶ್ ಸುಬ್ರಹ್ಮಣ್ಯ, ತೇಜು ಉಮ್ಮಿಕಳ ತೀರ್ಪುಗಾರರಾಗಿ ಸಹಕರಿಸಿದರು.







