ಅರಂತೋಡು – ತೊಡಿಕಾನ ವ್ಯಾಪ್ತಿಯಲ್ಲಿ 78.5 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿಪೂಜೆ

0

ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 78.5 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಅರಂತೋಡು ತೊಡಿಕಾನ ಗ್ರಾಮದ ಬಹು ಬೇಡಿಕೆಯ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿಗಳ ಕನಸು ನನಸಾಗಲಿದೆ. ಗ್ರಾಮಗಳ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗಳು ಅಭಿವೃದ್ಧಿ ಆದಷ್ಟು ಶೀಘ್ರವೇ ಪೂರ್ಣ ಗೊಳಿಸಲಿದ್ದೇವೆ , ಹಾಗೂ ಮುಖ್ಯಮoತ್ರಿಗಳ ಜೊತೆ ಚರ್ಚಿಸಿ ಸುಳ್ಯ ವಿ ಹೆಚ್ಚಿನ ಅನುದಾನ ತರಿಸುವ , ಹಾಗೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ವನ್ನು ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ವಿವಿಧ ಕಾಮಗಾರಿಗಳ ಅಭಿವೃದ್ಧಿಯಂತೆ ತೊಡಿಕಾನ- ಕುಂಟುಕಾಡು ರಸ್ತೆ- 15.5 ಲಕ್ಷ , ತೊಡಿಕಾನ- ಚಿಟ್ಟನೂರು ರಸ್ತೆ 10 ಲಕ್ಷ , ಬಾಳೆಕಜೆ ಹರ್ಲಡ್ಕ ರಸ್ತೆ- 5.5 ಲಕ್ಷ , ತೊಡಿಕಾನ ಪಾಷಾಣಮೂರ್ತಿ ಸಂಪರ್ಕ ರಸ್ತೆ -7 ಲಕ್ಷ ನಾಗನಮೂಲೆ ಬಾಳೆಕಜೆ ರಸ್ತೆ – 5.5ಲಕ್ಷ ಪಂಜಿ ಕೋಡಿ ನಾಗನಮೂಲೆ ರಸ್ತೆ -5 ಲಕ್ಷ , ಕಾಡುಪಂಜ ಊರುಪಂಜ ರಸ್ತೆ- 10 ಲಕ್ಷ ರೂಗಳಲ್ಲಿ ರಸ್ತೆ ಕಾಮಗಾರಿಗಳ ಅಭಿವೃದ್ಧಿಯಾಗಲಿದೆ .

ಈ ಸಂದರ್ಭದಲ್ಲಿ ಪಕ್ಷದ ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ ಉಳುವಾರು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ, ಕಾರ್ಯದರ್ಶಿ ಸತೀಶ್ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಆಡ್ತಲೆ, ಅರಂತೋಡು _ ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ್, ರೋಹಿತ್, ಸಹಿತ ಹಲವಾರು ಕಾರ್ಯಕರ್ತರು ರಸ್ತೆಯ ಫಲನುಭವಿಗಳು ಉಪಸ್ಥಿತರಿದ್ದರು.