ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರ ಕೊಡುಗೆ














ಗುತ್ತಿಗಾರಿನ ಪಿ.ಎಂ.ಶ್ರೀ , ಕೆ.ಪಿ.ಎಸ್ ಹಿ.ಪ್ರಾ. ಶಾಲೆಗೆ
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರು 10 ಕಂಪ್ಯೂಟರ್ ಗಳ ಕೊಡುಗೆಯನ್ನು ಸೆ.18 ರಂದು ನೀಡಿದರು.

ಗ್ರಾಮೀಣ ಭಾಗದಲ್ಲಿ ಕಾರ್ಯಚರಿಸುತ್ತಿರುವ, 330 ಮಕ್ಕಳನ್ನು ಹೊಂದಿರುವ ಸರ್ಕಾರಿ ಶಾಲೆಯಾದ ಪಿ.ಎಂ.ಶ್ರೀ .ಕೆ.ಪಿ.ಎಸ್ ಶಾಲೆಯಲ್ಲಿ ಕಂಪ್ಯೂಟರ್ ಕೊರತೆ ಇರುವುದನ್ನು ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ರೇಣುಕಾ ಪ್ರಸಾದ್ ಕೆ.ವಿ ಅವರಲ್ಲಿ ಮನವಿ ಮುಖಾಂತರ ಭೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಆರ್.ಪಿ. ಮತ್ತು ಡಾ.ಜ್ಯೋತಿ ಆರ್ ಪ್ರಸಾದ್ ಕಂಪ್ಯೂಟರ್ ಕೊಡುವ ನಿರ್ಧಾರಕ್ಕೆ ಬಂದಿದ್ದರು.

ಅದರಂತೆ ಗುತ್ತಿಗಾರಿಗೆ ಆಗಮಿಸಿ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ.ರೆಣುಕಾ ಪ್ರಸಾದ್ ಕೆ.ವಿ, ಕೆವಿಜಿ ಇಂಜಿನಿಯರ್ ಪ್ರಾಂಶುಪಾಲ ಸುರೇಶ್ , ಕೆವಿಜಿ ಸಂಸ್ಥೆಯ ಬಿ.ಟಿ ಮಾದವ, ಭವಾನಿ ಶಂಕರ ಅಡ್ತಲೆ, ದಿನೇಶ್ ಮಡ್ತಿಲ, ವಸಂತ ಕಿರಿಭಾಗ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾ.ಪಂ ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಪ್ರಸನ್ನ ಅಮೆ, ಸದಸ್ಯರು, ಪ್ರಭಾರ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ತುಂಬತ್ತಾಜೆ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







