ಮಡಿಕೇರಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸಂಪಾಜೆ ಫ್ರೌಢ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

0

ಶಿಕ್ಷಣ ಇಲಾಖೆ ವತಿಯಿಂದ ನಾಪೋಕ್ಲು ಹೋದ ವಾಡ ದಲ್ಲಿ ನಡೆದ ಮಡಿಕೇರಿ ತಾಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢ ಶಾಲೆಯ ಬಾಲಕಿಯರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಅಮೃತಾ , ಖುಷಿ , ಫಾತಿಮತ್ ಶನಾ , ಕಾವ್ಯ, ಮನ್ವಿತಾ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಪಾಜೆ ಸಂಯುಕ್ತ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಕುಶಾಲಪ್ಪ ಕೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಮುಖ್ಯಪಾಧ್ಯಾಯರು , ಅಧ್ಯಾಪಕ ವೃಂದ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.