ಡಿ.ಕೆ.ಶಿವಕುಮಾರ್ ಇಚ್ಛಾಶಕ್ತಿ ತೋರಿಸಿದ್ದಾರೆ : ಕೆಂ.ಮುಸ್ತಫಾ

0

ಕರಾವಳಿ ಜಿಲ್ಲೆಗಳು ವಿಶೇಷವಾದ ಭೌಗೋಳಿಕ ಸ್ವರೂಪ ಇರುವ ಪ್ರದೇಶ ವಿಫುಲವಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಚಿಂತನೆಯನ್ನು ಹಿಂದಿನವರು ಮಾಡಿರಲಿಲ್ಲ. ಇಲ್ಲಿ ರಾಜಕೀಯವಾಗಿ ನೋಡಿದರೆ ಅನೇಕ ವರ್ಷಗಳಿಂದ ಬಿಜೆಪಿಯವರು ಶಾಸಕರುಗಳಾಗಿ, ಸಂಸದರುಗಳಾಗಿ ಕೆಲಸ ಮಾಡಿದರು. ಆದರೆ ಅವರಿಗೆ ಇಚ್ಛಾಶಕ್ತಿ ಇರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್‌ರವರು ಆ ಚಿಂತನೆ ಮಾಡಿದರು. ತುಳುಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಿರುವುದು ಐತಿಹಾಸಿಕವಾದುದು. ಇದು ತುಳುನಾಡಿಗೆ ನೀಡಿರುವ ಬಹುದೊಡ್ಡ ಗೌರವ.
ಕುಂದಾಪುರದ ಕೋಡಿಯಿಂದ ಆರಂಭಿಸಿ ಕಾಸರಗೋಡಿನ ಗಡಿಯವರೆಗೆ ಬೀಚ್ ಅಭಿವೃದ್ಧಿ ಮಾಡಲು ನಿರ್ಧರಿಸಿರುವುದು, ಮೀನುಗಾರಿಕೆಗೆ ಪ್ರೋತ್ಸಾಹ ಹಾಗೂ ರಸ್ತೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಕೊಡಲು ನಿರ್ಧರಿಸಿರುವುದು ಕರಾವಳಿಗೆ ಡಿ.ಕೆ.ಶಿವಕುಮಾರ ಸರಕಾರದ ಬಹುದೊಡ್ಡ ಕೊಡುಗೆ.
ಇನ್ನು ಸುಳ್ಯದ ವಿಚಾರ ಇಲ್ಲದಿರಬಹುದು. ಆದರೆ ಬೇರೆ ಬೇರೆ ವ್ಯಕ್ತಿಗಳು ಮತ್ತು ಸಂಘಟನೆಗಳು ನೀಡಿರುವ ಮನವಿಗಳಿಗೆ ಮುಖ್ಯಮಂತ್ರಿಗಳಿಂದ ಮತ್ತು ಸಚಿವರುಗಳಿಂದ ಸೂಕ್ತ ಸ್ಪಂದನೆ ದೊರೆತಿದೆ. ಅದು ಮುಂದಿನ ದಿನಗಳಲ್ಲಿ ಆದೇಶವಾಗಿ ಕೈಸೇರಲಿದೆ.
-ಕೆ.ಎಂ.ಮುಸ್ತಫಾ
ಅಧ್ಯಕ್ಷರು, ಸೂಡಾ ಸುಳ್ಯ