ಸುಳ್ಯ : ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟ

0

ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಮುಂದಿನ ಪೀಳಿಗೆಗೆ ಹಸ್ತಾoತರ ವಾಗಲು ಇಂತಹ ಕ್ರೀಡೆಗಳು ಸಹಕಾರಿ : ಕೆ. ಎಂ.ಮುಸ್ತಫ

ಸುಳ್ಯ ಕಾಂತಮoಗಲದ ಮನಮೋಹನ ಪುತ್ತಿಲ ರವರ ಗೆದ್ದೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುಳ್ಯ ತಾಲೂಕು ಮಟ್ಟದ ಕೆಸರುಗೆದ್ದೆ ಕ್ರೀಡಾ ಕೂಟ ಸೆ. 20 ರಂದು ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ವಹಿಸಿದ್ದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ. ಮುಸ್ತಫ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನ ದ ಭರಾಟೆಯಲ್ಲಿ ಸಂಪ್ರದಾಯಗಳು,ಪ್ರಕೃತಿ ಯೊಂದಿಗೆ ಮನುಷ್ಯರಲ್ಲಿ ಇರಬೇಕಾದ ಭಾoದವ್ಯಗಳು ಮರೆಯಾಗುತ್ತಿವೆ. ವಿದ್ಯಾರ್ಥಿ ದಿಶೆಯಿಂದಲೇ ಇದನ್ನು ಮೈಗೂಡಿಸಲು ಇಂತಹ ಕ್ರೀಡಾಕೂಟ ಸಹಕಾರಿ ಎಂದರು. ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಮನಮೋಹನ ಪುತ್ತಿಲ ತೆಂಗಿನ ಕಾಯಿ ಒಡೆದು ಕ್ರೀಡಾoಗಣ ಉದ್ಘಾಟಿಸಿದರು.

ವೇದಿಕೆಯಲ್ಲಿ ಕ್ರೀಡಾಕೂಟಕ್ಕೆ ಜೆರ್ಸಿ ಮತ್ತು ಸ್ಪೋರ್ಟ್ಸ್ ಕ್ಯಾಪ್ ಪ್ರಾಯೋಜಿಸಿದ ಆದಿ ವೆಜಿ ಟೇಬಲ್ ಮಾಲಕ ಮಣಿಕಂಠ ಉಪಸ್ಥಿತರಿದ್ದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಗೀತಾ ಸ್ವಾಗತಿಸಿ, ನಿಲಯ ಮೇಲ್ವಿಚಾರಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ 11 ವಿದ್ಯಾರ್ಥಿ ನಿಲಯಗಳ ಸುಮಾರು 700 ವಿದ್ಯಾರ್ಥಿ ಗಳು ಭಾಗವಹಿಸಿದ್ದರು.