ಅ.3 ಮತ್ತು ಅ.4 ರಂದು ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಉತ್ಸವ

0

ಪ್ರಚಾರ ಪೋಸ್ಟರ್ ಬಿಡುಗಡೆ ಗೊಳಿಸಿದ ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಅಕ್ಟೋಬರ್ 3 ಮತ್ತು 4 ರಂದು ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿ ಯಿರುವ ಜೂನಿಯರ್ ಕಾಲೇಜು ಮೈದಾನದದಲ್ಲಿ ನಡೆಯಲಿದ್ದು
ಪ್ರಚಾರ ಸಾಮಾಗ್ರಿ ಪೋಸ್ಟರ್ ನ್ನು ಸುಳ್ಯತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ಎಂ ರವರು ಸೆ 20 ರಂದು ಬಿಡುಗಡೆ ಗೊಳಿಸಿದರು.

ಕ್ರೀಡೆಗಳು ನಾಡಿನಲ್ಲಿ ಶಾಂತಿ, ಸೌಹಾರ್ದತೆಯ ಕೊಂಡಿಯಾಗಿ ಕಾರ್ಯಾ ಚರಿಸಲಿ ಎಂದು ಶುಭ ಹಾರೈಸಿದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫಾ,ಸಂಘಟನಾ ಸಮಿತಿ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಪದಾಧಿಕಾರಿಗಳಾದ ಜಿ ಎ. ಮಹಮ್ಮದ್ ಸಹನಾ ಶಾಮಿಯಾನ ಗುರು ಪ್ರಸಾದ್ ಗುರು ಅರೇಂಜರ್ಸ್, ಶಾಫಿ ಪ್ರಗತಿ ಸೌಂಡ್ಸ್ & ಲೈಟಿಂಗ್ಸ್, ಶ್ರೀಧರ ಸ್ವಾಮಿ ಮೈಕ್, ಮೊದಲಾದವರು ಉಪಸ್ಥಿತರಿದ್ದರು.