














ಇತ್ತೀಚೆಗೆ ನಿಧನರಾದ ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ನಿವಾಸಿ, ದಿ.ದುಗ್ಗಮ್ಮ ಬಳ್ಳಡ್ಕ ಇವರಿಗೆ ಶ್ರದ್ಧಾಂಜಲಿ ಸಭೆಯು ಸೆ.20 ರಂದು ಮೃತರ ಸ್ವಗೃಹದಲ್ಲಿ ನಡೆಯಿತು. ರತ್ನಾಕರ ಗೌಡ ಬಳ್ಳಡ್ಕ ಮೃತರಿಗೆ ನುಡಿನಮನ ಸಲ್ಲಿಸಿದರು. ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಈ ಸಂದರ್ಭದಲ್ಲಿ ಮೃತರ ಪುತ್ರ ನಾಗಪ್ಪ ಗೌಡ ಬಳ್ಳಡ್ಕ, ಪುತ್ರಿಯರಾದ ಶ್ರೀಮತಿ ಶೇಷಮ್ಮ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಶೀಲಾವತಿ, ಶ್ರೀಮತಿ ಲಲಿತಾ ಹಾಗೂ ಸೊಸೆ ಶ್ರೀಮತಿ ಭಾಗೀರಥಿ, ಮೊಮ್ಮಕ್ಕಳಾದ ಗಣೇಶ್, ಕೀರ್ತನ್, ಅಕ್ಷಯ, ರಾಧಾಕೃಷ್ಣ ಬೈತಡ್ಕ, ಜಯರಾಮ, ಸತೀಶ್, ಸೌಮ್ಯ, ಶ್ವೇತಾ, ತುಳಸಿ, ಕಿರಣ್, ಕೃತೇಶ್, ಸಾವಿತ್ರಿ, ರೋಹಿಣಿ, ಮರಿಮಕ್ಕಳಾದ ಸಾಧ್ವಿ, ಸಾಧನ್ ಹಾಗೂ ದಿಗಂತ್ ಉಪಸ್ಥಿತರಿದ್ದರು.







