ವೈವಿಧ್ಯಮಯ ಕಾರ್ಯಕ್ರಮ, ಅದ್ದೂರಿ ಮೆರವಣಿಗೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ಇದರ 56ನೇ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14 ರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದು ಸೆ.20 ಅದ್ದೂರಿ ಶೋಭಾಯಾತ್ರೆ ನಡೆದು ಮೂರ್ತಿ ಜಲಸ್ತಂಭನ ನಡೆಯಿತು.














ಸೆ.14 ರ ಪೂರ್ವಾಹ್ನ ಗಣಪತಿ ಪ್ರತಿಷ್ಠಾಪನೆ ನಡೆದು 108 ತೆಂಗಿನ ಕಾಯಿ ಗಣಪತಿ ಹವನ, ನಡೆದಿದ್ದು ಅಪರಾಹ್ನ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಸಂಜೆ ಭಜನೆ ನಡೆಯಿತು., ಆ ಬಳಿಕ ಶ್ರೀ ಗಣೇಶ್ ದೇವರಗದ್ದೆ, ಶ್ರೀ ಚಂದ್ರಶೇಖರ ಮಾನಾಡು, ಕ| ಪಲ್ಲವಿ ಸುಳ್ಯ (ಆಲೆಟ್ಟಿ) ಇವರಿಂದ ಸುಗಮ ಸಂಗೀತ (ಕರೋಕೆ) ನಡೆಯಿತು, ರಾತ್ರಿ ಡಾ. ರಶ್ಮಿ ಥಾಪರ್, ನಿತ್ಯ ಸಿಂಚನ ಸ್ಕೂಲ್ ಆಫ್ ಡ್ಯಾನ್ಸ್ & ಮ್ಯೂಸಿಕ್ ಬೆಂಗಳೂರು ಇವರಿಂದ “ನೃತ್ಯ ಸಿಂಚನ” ರ ನಡೆಯಿತು. ರಾತ್ರಿ ಗೀತ ನೃತ್ಯಾಲಯ ಧರ್ಮಸ್ಥಳ ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಚೈತ್ರಾ ಭಟ್ ಮತ್ತು ತಂಡದವರಿಂದ “ಸಮೂಹ ನೃತ್ಯ ನಡೆಯಿತು. ಸೆ.15 ಸೆ.16, ಸೆ.17 ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿತು. ಸೆ.15ರಂದು ಸಂಜೆ ಭಜನೆ, ಅಕ್ಷರ ಗಾನ ಸುಧೆ ಸುಬ್ರಹ್ಮಣ್ಯ ಪ್ರಸ್ತುತಪಡಿಸುವ ‘ಭಕ್ತಿ-ಭಾವ ಗಾಯನ ನಡೆದು’ ರಾತ್ರಿ ನೂಪುರ ನಾದ ಕಲಾ ತಂಡ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆದು. ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇದರ ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯೋಹಂ. ನಡೆಯಿತು. ಸೆ. 16 ರ ಸಂಜೆ ಭಜನೆ ಬಳಿಕ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಪೌರಾಣಿಕ ಯಕ್ಷಗಾನ “ಗಜೇಂದ್ರ ಮೋಕ್ಷ-ಕರ್ಣಾವಸಾನ” ನಡೆಯಿತು ಸೆ. 17 ಬೆಳಿಗ್ಗೆ ಮತ್ತು ಸಂಜೆ ಭಜನೆ ನಡೆದು, ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. . ಆ ಬಳಿಕ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಕುಮಾರ ವೈಭವ” ನಡೆಯಿತು. ಸೆ.18 ರ ಸಂಜೆ ಭಜನೆ, ಬಳಿಕ ನಾದ ವೈಭವ ತಂಡದವರಿಂದ “ವಾದ್ಯ ಗೋಷ್ಠಿ,” ನಡೆದು ಅಮ್ಮ ತಂಡ ಅಭಿನಯಿಸುವ ರಂಗ್ ರಾಜೆ ಸುಂದರ್ ರೈ ಮಂದಾರ ನಿರ್ಮಾಣ ನಿರ್ದೇಶನ ಅಭಿನಯದಲ್ಲಿ ತುಳು ಹಾಸ್ಯಮಯ ನಾಟಕ ” ಚಿ.ಸೌ.ಸುಮಂಗಲಾ” ನಡೆಯಿತು. ನಾಟಕ ನೋಡಲು ಸಾವಿರಕ್ಕೂ ಅಧಿಕ ಜನ ಸಭಾಂಗಣದಲ್ಲಿ ತುಂಬಿ ನಾಟಕ ವೀಕ್ಷಿಸಿದರು. ಸೆ. 19 ರ ಪೂರ್ವಾಹ್ನ ಗಂಟೆ ಯಕ್ಷಗಾನ ತಾಳಮದ್ದಳೆ- “ಅತಿಕಾಯ ಮೋಕ್ಷ” ನಡೆದಿದ್ದಿ ಜಿಲ್ಲೆಯ ಗಣ್ಯ ಕಲಾವಿದರು ಭಾಗವಹಿಸಿದ್ದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಹಾಡುಗಾರಿಕೆ ನಡೆಯಿತು. ಸಂಜೆ ಗಧಾರ್ಮಿಕ ಸಭೆ ನಡೆದು, ಬಳಿಕ ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ. ನಡೆಯಿತು. ರಾತ್ರಿ ವಸಂತ್ ಆಚಾರ್ಯ ಕಾಯರ್ತೋಡಿ ಸಾರಥ್ಯದ ಪ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಸುಳ್ಯ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. ಸೆ. 20 ರ ಬೆಳಗ್ಗೆ ಯಜೇಶ್ ಆಚಾರ್ ಮತ್ತು ಬಳಗವರಿಂದ ಭಕ್ತಿ ಸಂಗೀತ, ನಡೆಯಿತು. ಅಪರಾಹ್ನ ಮಹಾಮಂಗಳಾರತಿ, ನಡೆದು ಸರ್ವಾಲಂಕೃತ ರಥದಲ್ಲಿ, ಬ್ಯಾಂಡ್, ವಾಲಗ , ಟ್ಯಾಬ್ಲೋ ಗಳೊಂದಿಗೆ ಶ್ರೀ ಗಣಪತಿ ಶೋಭಾಯಾತ್ರೆ ನಡೆದು ಕುಮಾರಧಾರ ನದಿಯಲ್ಲಿ ಮೂರ್ತಿಯ ಜಲ ಸ್ತಂಭನ ನಡೆಯಿತು.
ಮನಮುದಗೊಳಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ
ಗಣೇಶೋತ್ಸವದ ಅಂಗವಾಗಿ ಸೆ.17 ರ ಸಂಜೆ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಸಂಗೀತ ಕಲಾವಿದ ವಿದ್ವಾನ್ ಡಾ.ಕೊಲ್ಲಂ ಜಿ.ಎಸ್.ಬಾಲಮುರಳಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಮೇರು ಕಲಾವಿದರು ತನ್ನ ಎರಡು ಗಂಟೆಗಳ ಉತ್ಕೃಷ್ಟ ಪ್ರಸ್ತುತಿ ಮೂಲಕ ಕಲಾಸಕ್ತರ ಮನಮುದಗೊಳಿಸಿದರು.
ಶ್ರೀ ದೇವಳದ ರಥಬೀದಿಯ ಸಭಾಂಗಣದಲ್ಲಿ ನಡೆದ ಕಛೇರಿಯು ಸೇರಿದ್ದ ಸಂಗೀತ ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಕಾರ್ಯಕ್ರಮದ ನಡುವೆ ನಡೆದ ತನಿ ಆವರ್ತನವು ಹಿಮ್ಮೇಳ ಕಲಾವಿದರ ಕಲಾಪ್ರೌಢಿಮೆಗೆ ಸಾಕ್ಷಿಯಾಯಿತು. ಇವರಿಗೆ ಮೃದಂಗಂನಲ್ಲಿ ವಿದ್ವಾನ್ ಡಾ. ಪಾಲಕ್ಕಾಡ್ ಕೆ. ಜಯಕೃಷ್ಣನ್,
ಘಟಂನಲ್ಲಿ ವಿದ್ವಾನ್ ವೆಳ್ಳಾಟ್ಟಂಜೂರ್ ಶ್ರೀಜಿತ್ ಹಿಮ್ಮೇಳ ಸಹಕಾರ ನೀಡಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಶರ್ಮ, ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಕೋಶಾಧಿಕಾರಿ ದಿನೇಶ್ ಮೊಗ್ತ, ಸಂಚಾಲಕರಾದ ವೆಂಕಟ್ರಾಜ್, ಯಜ್ಞೇಶ್ ಆಚಾರ್, ರಾಜೇಶ್ ಎನ್ ಎಸ್, ಉಪಾಧ್ಯಕ್ಷರಾದ ಅಚ್ಚುತ ಗೌಡ, ಅಶೋಕ್ ಕುಮಾರ್ ಮೂಲೆಮಜಲು, ಸುಹಾಸ್ ಎಸ್.ಎಲ್, ಆದರ್ಶ ಕೆ.ಆರ್, ಗಿರಿಧರ ಸ್ಕಂದ, ಜತೆ ಕಾರ್ಯದರ್ಶಿಗಳಾದ ಗುರುಪ್ರಸಾದ್ ಮುಚ್ಚಿತ್ತಾಯ, ಶ್ರೀಕುಮಾರ್ ಬಿಲದ್ವಾರ, ಶೇಖರ್ ಕುಕ್ಕೆ, ನಾಗೇಶ್ ಬಳ್ಪ, ಯುವರಾಜ ಆಚಾರ್ಯ, ಜತೆ ಕೋಶಾಧಿಕಾರಿಗಳಾದ ದಿನೇಶ್ ಸಂಪ್ಯಾಡಿ, ದೀಪಕ್ ನಂಬಿಯಾರ್, ಜಯರಾಮ ಎಚ್ ಎಲ್, ಯಶೋಧಕೃಷ್ಣ, ಸುಖೇಶ್ ಬೇಕಲ್, ಸುಬ್ರಹ್ಮಣ್ಯ ಮಾನಾಡು, ಉಪ ಸಮಿತಿ ಸಂಚಾಲಕರುಗಳಾದ ಉಮೇಶ್ ಕೆ.ಎನ್, ರವೀಂದ್ರ ಕೆ, ನೂಚಿಲ ಕೃಷ್ಣ ಪ್ರಸಾದ್ ಕೆ.ಜಿ, ವೆಂಕಟೇಶ್ ಎಚ್ ಎಲ್, ರಾಧಾಕೃಷ್ಣ ಆರ್ವಾರ, ಡಾl ರವಿಕಕ್ಕೆಪದವು, ಕುಸುಮಾಧರ ಆರಾಧನ, ಗಿರೀಶ್ ಆಚಾರ್ಯ ಪೈಲಾಜೆ, ನಿರಂಜನ ಭಟ್, ಸುಬ್ರಹ್ಮಣ್ಯ ಶರ್ಮ, ಲೊಕೇಶ್ ಬಿ.ಎನ್, ಚಿದಾನಂದ ಕಂದಡ್ಕ, ನಿತಿನ್ ಭಟ್, ಪ್ರಶಾಂತ ಆಚಾರ್ಯ, ಲೊಕೇಶ್ ಎನ್ಎಸ್, ಟ್ರಸ್ಟ್ ನ ಸದಸ್ಯರಾದ ಗಣೇಶ್ ಪ್ರಸಾದ್ ಎನ್, ವಿವಿಧ ಸಮಿತಿಗಳ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ದುಡಿದರು.
ಧಾರ್ಮಿಕ ಸಭೆ
ಸೆ.19 ರ ಸಂಜೆ ಧಾರ್ಮಿಕ ಸಭೆ ನಡೆದಿದ್ದು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣ ಶರ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿಯ ಟ್ರಸ್ಟ್ ನ ಅಧ್ಯಕ್ಷ ವೆಂಕಟ್ರಾಜು ವೇದಿಕೆಯಲ್ಲಿದ್ದರು. ರಾಜೇಶ್ ಎನ್ ಎಸ್ ಸ್ವಾಗತಿಸಿ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು







