















ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಸೆ. 20 ರಂದು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನ ಗಿರಿದರ್ಶಿನಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ್ ಹೊನ್ನೇಡಿ, ಸ್ಥಾಪಕ ಕಾರ್ಯದರ್ಶಿ ಮತ್ತು ದಾರ್ಮಿಕ ಚಿಂತನ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕ್ ದೊಡ್ಡೇರಿ ಮತ್ತು ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಜನಾರ್ಧನ್ ಬಿ. ಕುರುಂಜಿಭಾಗ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜನಾರ್ಧನ ನಾಯ್ಕ್ ಕೇರ್ಪಳ, ನಿತ್ಯಾನಂದ ಕುಡೆಂಬಿ, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ, ಯುವ ವೇದಿಕೆ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ವರದಿ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರಿಗೆ ಮತ್ತು ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮತ್ತು ಕೋಶಾಧಿಕಾರಿ ಐತ್ತಪ್ಪ ಎನ್ ಲೆಕ್ಕಪತ್ರವನ್ನು ವಾಚಿಸಿದರು. ಮಹಿಳಾ ವೇದಿಕೆಯ ವರದಿಯನ್ನು ಕಾರ್ಯದರ್ಶಿ ಶ್ರೀಮತಿ ನಳಿನಿ ಸೀತಾನಂದ ಬೇರ್ಪಡ್ಕ ವಾಚಿಸಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಲಾಯಿತು. ಇವರವ ಪಟ್ಟಿಯನ್ನು ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಪದ್ಮಾವತಿ ಸುಳ್ಯ ವಾಚಿಸಿದರು. ಕೃಷಿ ಕ್ಷೇತ್ರದ ಸಾಧಕ ಬಾಳೆಗುಡ್ಡೆ ಕುಂಞಣ್ಣ ನಾಯ್ಕ್, ಧಾರ್ಮಿಕ ಕ್ಷೇತ್ರದ ಸೇವೆಗಾಗಿ ಲೋಕಯ್ಯ ನಾಯ್ಕ ಗುತ್ತಿಗಾರು, ಉದ್ಯಮ ಮತ್ತು ಕೃಷಿ ಕ್ಷೇತ್ರದ ಸಾಧನೆಗಾಗಿ ಕರುಣಾಕರ ಗಡಿಪಣೆ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಗೋಪಾಲ ಯೇನೆಕಲ್ಲುರವರನ್ನು ಹಾಗೂ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಕು.ಅಶ್ವಿತಾ ಎಂ.ಡಿ., ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಕು.ಭಾನವಿ ಪಿ.ಎಸ್, ಕು.ಶ್ರೇಯಾ ಎಂ.ರವರನ್ನು ಸನ್ಮಾನಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಪದ್ಮಾವತಿ ಸುಳ್ಯ, ಪ್ರ.ಕಾರ್ಯದರ್ಶಿ ರಮೇಶ್ ನೀರಬಿದಿರೆ, ಭವಾನಿಶಂಕರ ಕಲ್ಮಡ್ಕ, ಪದ್ಮಿನಿ ದೊಡ್ಡೇರಿ, ಉಪಾಧ್ಯಕ್ಷೆ ಶ್ರೀಮತಿ ಸುಲೋಚನಾ ನಾರಾಯಣ, ಕಾರ್ಯದರ್ಶಿ ಸಮಿತಿ ಸದಸ್ಯೆ ಶ್ರೀಮತಿ ಶೋಭ ಎ.ಕೆ. ನಾಯ್ಕ್ ಸನ್ಮಾನ ಪತ್ರ ವಾಚಿಸಿದರು. ಕು. ಪಾಯಲ್ ಮತ್ತು ಕು. ವರ್ಷ ಪ್ರಾರ್ಥಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಜಗದೀಶ್ ಅರಂಬೂರು ವಂದಿಸಿದರು. ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗಿರಿದರ್ಶಿನಿ ಸಭಾಭವನದ ಮುಖಮಂಟಪ ಮತ್ತು ಸೀಲಿಂಗ್ ನ ಉದ್ಘಾಟನೆಯನ್ನು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ದೇವಪ್ಪ ನಾಯ್ಕ ಹೊನ್ನೇಡಿಯವರು ನಾಮ ಫಲಕ ಅನಾವರಣ ಮಾಡುವುದರ ಮೂಲಕ ಉದ್ಘಾಟಿಸಿದರು. ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.







