ಹರಿಹರ ಪಲ್ಲತ್ತಡ್ಕದಲ್ಲಿ ಶ್ರೀ ಗಣೇಶೋತ್ಸವ

0

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ವತಿಯಿಂದ ಸೆ.13 ರಿಂದ ಸೆ.15 ರ ಗಣೇಶೋತ್ಸವ ನಡೆಯಿತು.

ಸೆ.13 ರಂದು ಗೌರಿ: ಮೂರ್ತಿ ಪ್ರತಿಷ್ಟಾಪನೆ ನಡೆದು ಗೌರಿ ಪೂಜೆ ನಡೆಯಿತು. ಸೆ.14 ರಂದು ಗಣೇಶ ಮೂರ್ತಿ ಪ್ರತಿಷ್ಠಪಾಪಿಸಲಾಯಿತು. ಬಳಿಕ ಲಕ್ಷ್ಮೀ ಸಹಿತ ಗಣಹವನ ನಡೆಯಿತು. ಸೆ.15 ರಂದು ಗೌರಿ ಮತ್ತು ಗಣೇಶ ನ ವೈಭವದ ಶೋಭಾಯಾತ್ರೆ ಹರಿಹರ ಪಲ್ಲತ್ತಡ್ಕ ಬಾಳುಗೋಡು ಕೋಟೆ, , ಐನೆಕಿದು ನಲ್ಲಿ ಸಾಗಿ ಹರಿಹರ ಪಲ್ಲತ್ತಡ್ಕದಲ್ಲಿ ಗೌರಿ ಮತ್ತು ಗಣೇಶ ನ ಮೂರ್ತಿಗಳ ಜಲಸ್ತಂಭನ ನಡೆಸಲಾಯಿತು. ಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು. ಧಾರ್ಮಿಕ ಸಭೆ ನಡೆಸಲಾಯಿತು. ಕಾರ್ಯಕ್ರಮ ಯಶಸ್ವಿ ಗೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.