ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ದೋಲ್ಪಾಡಿ ಸ.ಹಿ.ಪ್ರಾ.ಶಾಲೆಗೆ ಊಟದ ತಟ್ಟೆ ಇಡುವ ಸ್ಟಾಂಡ್ ಕೊಡುಗೆ

0

ದ. ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ದೋಲ್ಪಾಡಿ ಇಲ್ಲಿಗೆ ರೋಟರಿ ಕ್ಲಬ್ ಸಂಸ್ಥೆ ಬೆಳ್ಳಾರೆ ಟೌನ್ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲಾ ಮಕ್ಕಳಿಗೆ ಬಹು ಉಪಯುಕ್ತವಾದ ಊಟದ ತಟ್ಟೆ ಇಡುವ ಸ್ಟ್ಯಾಂಡ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ. ಶ್ರೀಧರ ಮರಕ್ಕಡ ರವರು ಈ ಕೊಡುಗೆಯ ದಾನಿಗಳಾಗಿ ಸಹಕರಿಸಿದರು.
ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ದಯಾನಂದ ಗೌಡ ಕೂರೇಲು ಮಾತನಾಡಿ ಮಕ್ಕಳ ಅಗತ್ಯವನ್ನು ಮನಗಂಡು ಉಪಯುಕ್ತ ಸಾಮಗ್ರಿಗಳನ್ನು ಒದಗಿಸಿರುವ ದಾನಿಗಳ ಸೇವಾ ಮನೋಭಾವಕ್ಕೆ ಎಸ್.ಡಿ.ಎಂ.ಸಿ,ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಅಧ್ಯಕ್ಷ ಆರಿಫ್ ಬೆಳ್ಳಾರೆ, ಕಾರ್ಯದರ್ಶಿ ಪ್ರಶಾಂತ್ ತಂಟೆಪ್ಪಾಡಿ, ವಲಯ ಸೇನಾನಿ ಚಂದ್ರಶೇಖರ ರೈ ,ಖಜಾಂಜಿ ರವೀಂದ್ರ ಗೌಡ, ಇತರೇ ರೋಟರಿ ಪದಾಧಿಕಾರಿಗಳು ಹಾಗೂ ಸದಸ್ಯರು, ಎಸ್. ಡಿ.ಎಂ.ಸಿ ಸದಸ್ಯರಾದ ಯುವರಾಜ ಕೊಜಂಬೆಡಿ,ಶ್ರೀಮತಿ ಸುಂದರಿ ಹಾಗೂ ಹಿರಿಯ ವಿದ್ಯಾರ್ಥಿಗಳಾದ ವೇದವ್ಯಾಸ ರೈ,ವೆಂಕಟರಮಣ ಗೌಡ ಮರಕ್ಕಡ ಮತ್ತು ಪ್ರಕಾಶ್ ಮರಕಡ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಜಯಣ್ಣರವರು ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ನೀಡಿದ ಅಮೂಲ್ಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಸಹಶಿಕ್ಷಕಿ ಶ್ರೀಮತಿ ಚಂಚಲಾಕ್ಷಿ ಸ್ವಾಗತಿಸಿ, ಸಹಶಿಕ್ಷಕರಾದ ಜಯರಾಜ್ ಡಿ.ಎಸ್ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಕಲಾವತಿ ಎಂ. ಕೆ ಮತ್ತು ಶ್ರೀಮತಿ ರಶ್ಮಿ .ಕೆ ಇವರು ಸಹಕರಿಸಿದರು.ಶಿಕ್ಷಕಿ ಕುಮಾರಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.