ಸುಳ್ಯ ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಮಹಾಸಭೆ

0

ಸಂಘಕ್ಕೆ ರೂ.1,08,769 ಲಕ್ಷ ಲಾಭ, ಶೇ.8 ಡಿವಿಡೆಂಟ್

ಸುಳ್ಯ ತಾಲೂಕು ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆಡಳಿತಾಧಿಕಾರಿ ಸಹಕಾರ ಅಭಿವೃದ್ದಿ ಅಧಿಕಾರಿ ಶಿವಲಿಂಗಯ್ಯರವರ ಅಧ್ಯಕ್ಷತೆಯಲ್ಲಿ ಸೆ.24 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಶಿವಲಿಂಗಯ್ಯರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಮಾರಿ ಕವಿತ ಎಸ್ .ವರದಿ ಮಂಡಿಸಿ ಆರಂಭದಲ್ಲಿ 714 ಸದಸ್ಯರಿಂದ ರೂ.4,31,125 ಮತ್ತು ಸರ್ಕಾರದ ಸಹಾಯಧನದಲ್ಲಿ 126 ಸದಸ್ಯರ ರೂ.63,000 ಪಾಲು ಹಣದೊಂದಿಗೆ ಒಟ್ಟು 840 ಜನ‌ ಸದಸ್ಯರಿಂದ ಪಾಲು ಹಣ,ಪಾಲು ಶುಲ್ಕ,ಪ್ರವೇಶ ಶುಲ್ಕದೊಂದಿಗೆ ಸಂಘ ಪ್ರಾರಂಭಗೊಂಡಿತು ಎಂದು ಹೇಳಿದರು.


ಸಂಘವು ವರದಿ ಸಾಲಿನಲ್ಲಿ ಎಲ್ಲರ ಸಹಕಾರದೊಂದಿಗೆ ರೂ.86 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.1,08,769 ಲಾಭ ಗಳಿಸಿರುತ್ತದೆ.
ಸದಸ್ಯರಿಗೆ ಶೇ.8 ಡಿವಿಡೆಂಟ್ ನೀಡಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಪದನಿಮಿತ್ತ ನಿರ್ದೇಶಕರಾದ ಸುಳ್ಯದ ಸಿ.ಡಿ.ಪಿ.ಒ ಶ್ರೀಮತಿ ಶೈಲಜಾ ಉಪಸ್ಥಿತರಿದ್ದು ಮಾತನಾಡಿದರು.
ಪದ್ಮಿನಿ ದೊಡ್ಡೇರಿ ಪ್ರಾರ್ಥಿಸಿ ,ಕು.ಕವಿತಾ ವಂದಿಸಿದರು.
ಸಭೆಯಲ್ಲಿ ಮಾಜಿ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮ್,ಉಪಾಧ್ಯಕ್ಷೆ ಶ್ರೀಮತಿ ಲತಾಕುಮಾರಿ ಹಾಗೂ ನಿರ್ದೇಶಕರು ,ಸದಸ್ಯರು ಉಪಸ್ಥಿತರಿದ್ದು ಸಂಘದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.