ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ














ಜಿಲ್ಲಾಮಟ್ಟದ 14 ವರ್ಷ ವಯೋಮಾನದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸರಕಾರ , ಶಾಲಾ ಶಿಕ್ಷಣ ಇಲಾಖೆ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಎಕ್ಸೆಲ್ ವಿದ್ಯಾಸಂಸ್ಥೆಗಳು ಗುರುವಾಯನಕೆರೆ ಇವರ ಆಶ್ರಯದಲ್ಲಿ ನಡೆದ ಪಂದ್ಯದಲ್ಲಿ.
ಅಮೃತ ಲಕ್ಷ್ಮಿ 6ನೇ ತರಗತಿ, ಅಮೃತ ಕರೂರ್ 8ನೇ ತರಗತಿ, ಆದ್ಯ ಸಿ ಎಂಟನೇ ತರಗತಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ತಂಡದಿಂದ ಆದ್ಯ ಸಿ, ಅಮೃತಲಕ್ಷ್ಮಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.







