













ಕನಕಮಜಲು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಕೃಷಿಕರ ಬೆಳೆ ಹಾಗೂ ಗ್ರಾಮಸ್ಥರ ಜೀವ ಮತ್ತು ಆಸ್ತಿಗೆ ರಕ್ಷಣೆ ಒದಗಿಸಲು ತುರ್ತು ಜನ ಸಂಪರ್ಕ ಸಭೆ ಸೆ. 25ರಂದು ಸಂಜೆ 4 ಗಂಟೆಗೆ ಕನಕಮಜಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಕಾಡು ಪ್ರಾಣಿಗಳ ಹಾವಳಿ ಹೋರಾಟ ಸಮಿತಿಯವರ ಮನವಿಗೆ ಸ್ಪಂದಿಸಿರುವ
ತಹಶೀಲ್ದಾರ್ ಶ್ರೀಮತಿ ಮಂಜುಳಾ, ಈ ಸಭೆಯ ನೇತೃತ್ವ ವಹಿಸಿದ್ದು ಸಭೆಯಲ್ಲಿ ಕಂದಾಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಪಿಡಬ್ಲ್ಯುಡಿ ಇಂಜಿನಿಯರ್ ಗಳು, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.







